ಕರ್ನಾಟಕ

karnataka

ETV Bharat / state

ಹೊರಗುತ್ತಿಗೆ ವಾಹನ ಬಳಕೆಯಲ್ಲಿ ಭ್ರಷ್ಟಾಚಾರ ಆರೋಪ: ಜಿಲ್ಲಾಡಳಿತದ ವಿರುದ್ಧ ತಮಟೆ ಚಳವಳಿ - Protest by Kannada organizations at Chamrajnagar

ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ ಮಾಲೀಕರ ಹೆಸರನ್ನೇ ಸೃಷ್ಟಿಸಿ ಹಣ ಮಾಡುತ್ತಿದ್ದಾರೆ ಎಂದು ಚಾಮರಾಜನಗರ ಜಿಲ್ಲಾಡಳಿತ ವಿರುದ್ಧ ಕನ್ನಡಪರ ಸಂಘಟನೆಗಳು ತಮಟೆ ಚಳವಳಿ ನಡೆಸಿದವು.

Chamrajnagar
ಚಾಮರಾಜನಗರ ಜಿಲ್ಲಾಡಳಿತ ವಿರುದ್ಧ ತಮಟೆ ಚಳವಳಿ

By

Published : Nov 26, 2019, 3:20 PM IST

ಚಾಮರಾಜನಗರ: ಹೊರಗುತ್ತಿಗೆ ಆಧಾರದ ಮೇಲೆ ವಾಹನ ಬಳಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಕನ್ನಡಪರ ಸಂಘಟನೆಗಳು ತಮಟೆ ಚಳವಳಿ ನಡೆಸಿ ಪ್ರತಿಭಟಿಸಿದವು.

ಚಾಮರಾಜನಗರ ಜಿಲ್ಲಾಡಳಿತ ವಿರುದ್ಧ ತಮಟೆ ಚಳವಳಿ

ಜಿಪಂನ ವಿವಿಧ ಇಲಾಖೆಗೆ ಹೊರಗುತ್ತಿಗೆಯ ಮೇಲೆ ವಾಹನಗಳನ್ನು ತೆಗೆದುಕೊಳ್ಳುತ್ತಿದ್ದು, ಅದರಲ್ಲಿ ಭ್ರಷ್ಟಾಚಾರ ಎಸಗಲಾಗುತ್ತಿದೆ. ಕೆಟಿಪಿಪಿ ಕಾಯ್ದೆಯನ್ನು ಉಲ್ಲಂಘಿಸಿ ಮಾಲೀಕರ ಹೆಸರನ್ನೇ ಸೃಷ್ಟಿಸಿ ಹಣ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಈ ಸಂಬಂಧ ಉನ್ನತಮಟ್ಟದ ತನಿಖೆ ನಡೆಯಬೇಕು, ಹೊರಗುತ್ತಿಗೆ ಆಧಾರದ ವಾಹನ ಬಳಕೆಯಲ್ಲಾಗುತ್ತಿರುವ ಭ್ರಷ್ಟಾಚಾರ ನಿಲ್ಲಬೇಕು ಇಲ್ಲದಿದ್ದಲ್ಲಿ ನಿರಂತರ ಹೋರಾಟ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

For All Latest Updates

ABOUT THE AUTHOR

...view details