ಚಾಮರಾಜನಗರ: 200ಕ್ಕೂ ಅಧಿಕ ಅಡಿಕೆ, ತೆಂಗಿನ ಮರಗಳನ್ನು ನಾಶಗೊಳಿಸಿದ ತಹಶೀಲ್ದಾರ್ ನಡೆ ಖಂಡಿಸಿ ರೈತ ಸಂಘದ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಗ್ರಾಮ ಲೆಕ್ಕಾಧಿಕಾರಿ ನೀಡಿದ ತಪ್ಪು ಮಾಹಿತಿ: ಬೀದಿಗೆ ಬಂದ ರೈತ ಮಹಿಳೆಯ ಬದುಕು - ಚಾಮರಾಜನಗರದಲ್ಲಿ ರೈತರ ಪ್ರತಿಭಟನೆ
ರೈತ ಮಹಿಳೆ ಸಿದ್ದಮ್ಮ ಎಂಬವರು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಗ್ರಾಮ ಲೆಕ್ಕಾಧಿಕಾರಿ ನೀಡಿದ ವರದಿಯನ್ವಯ 200ಕ್ಕೂ ಹೆಚ್ಚು ಅಡಿಕೆ, ತೆಂಗಿನ ಮರಗಳನ್ನು ತಹಶೀಲ್ದಾರ್ ನೇತೃತ್ವದಲ್ಲಿ ನಾಶಗೊಳಿಸಲಾಗಿತ್ತು.
![ಗ್ರಾಮ ಲೆಕ್ಕಾಧಿಕಾರಿ ನೀಡಿದ ತಪ್ಪು ಮಾಹಿತಿ: ಬೀದಿಗೆ ಬಂದ ರೈತ ಮಹಿಳೆಯ ಬದುಕು protest against govt in chamrajnagar](https://etvbharatimages.akamaized.net/etvbharat/prod-images/768-512-6361469-thumbnail-3x2-cnr.jpg)
ನಗರದ ಭುವನೇಶ್ವರಿ ವೃತ್ತದಲ್ಲಿ ಸೇರಿದ ರೈತ ಸಂಘದ ಕಾರ್ಯಕರ್ತರು ತಹಶೀಲ್ದಾರ್ ವಿರುದ್ಧ ಧಿಕ್ಕಾರಿ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಮಹಿಳೆ ಸಿದ್ದಮ್ಮ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಗ್ರಾಮ ಲೆಕ್ಕಾಧಿಕಾರಿಯ ತಪ್ಪು ಮಾಹಿತಿ ಹಿನ್ನೆಲೆ 200ಕ್ಕೂ ಅಧಿಕ ಅಡಿಕೆ, ತೆಂಗಿನ ಮರಗಳನ್ನು ನಾಶಗೊಳಿಸಲಾಗಿತ್ತು. ತುಮಕೂರಿನ ಗುಬ್ಬಿ ತಹಶೀಲ್ದಾರ್ ಹಾಗೂ ಇತರೆ ಬೇಜವಾಬ್ದಾರಿ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಪ್ರತಿಭಟನಾನಿರತ ರೈತರು ಸರ್ಕಾರವನ್ನು ಒತ್ತಾಯಿಸಿದರು.
ಕೂಡಲೇ ಜಿಲ್ಲಾಡಳಿತ ರೈತ ಮಹಿಳೆ ಸಿದ್ದಮ್ಮ ಅವರಿಗೆ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದರೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.