ಚಾಮರಾಜನಗರ:ಕಂದಕಕ್ಕೆ ಬಿದ್ದು ನಿತ್ರಾಣಗೊಂಡಿದ್ದ ಭಾರೀ ಗಾತ್ರದ ಹೆಬ್ಬಾವನ್ಬು ರಕ್ಷಿಸಿ, ನೀರು ಕುಡಿಸಿ ಕಾಡಿಗೆ ಬಿಟ್ಟಿರುವ ಘಟನೆ ಯಳಂದೂರು ತಾಲೂಕಿನ ದಾಸನಹುಂಡಿ ಗ್ರಾಮದಲ್ಲಿ ನಡೆದಿದೆ.
ವಿಡಿಯೋ: ಕಂದಕಕ್ಕೆ ಬಿದ್ದು ನಿತ್ರಾಣಗೊಂಡಿದ್ದ ಹೆಬ್ಬಾವಿಗೆ ನೀರು ಕುಡಿಸಿದ ಉರಗಪ್ರೇಮಿ - ದಾಸನಹುಂಡಿ ಹೆಬ್ಬಾವು ರಕ್ಷಣೆ
ಅರಣ್ಯ ಇಲಾಖೆ ನಿರ್ಮಿಸಿದ್ದ ಕಂದಕ್ಕೆ ಬಿದ್ದು ನಿತ್ರಾಣಗೊಂಡಿದ್ದ ಹೆಬ್ಬಾವನ್ನು ರಕ್ಷಿಸಿದ ಸಂತೇಮರಹಳ್ಳಿಯ ಉರಗ ಪ್ರೇಮಿ ಮಹೇಶ್ ಹಾವಿಗೆ ನೀರು ಕುಡಿಸಿ ಸಮೀಪದ ಕಾಡಿಗೆ ಬಿಟ್ಟು ಬಂದಿದ್ದಾರೆ.
ಹೆಬ್ಬಾವು ರಕ್ಷಣೆ
ದಾಸನಹುಂಡಿ ಗ್ರಾಮದಲ್ಲಿರುವ ರವಿಬಾಬು ಎಂಬವವರ ಸಾಯಿ ಫಾರ್ಮ್ ಸಮೀಪ ಅರಣ್ಯ ಇಲಾಖೆ ನಿರ್ಮಿಸಿರುವ ಕಂದಕಕ್ಕೆ ಭಾರೀ ಗಾತ್ರದ ಹೆಬ್ಬಾವು ಬಿದ್ದಿತ್ತು. ವಿಚಾರ ತಿಳಿದು ಸ್ಥಳಕ್ಕೆ ಬಂದ ಸಂತೇಮರಹಳ್ಳಿಯ ಉರಗ ಪ್ರೇಮಿ ಮಹೇಶ್ ಹಾವು ರಕ್ಷಿಸಿದ್ದಾರೆ. ತೀರಾ ನಿತ್ರಾಣಗೊಂಡಿದ್ದ ಹಾವಿಗೆ ನೀರು ಕುಡಿಸಿ, ಆರೈಕೆ ಮಾಡಿ ಸಮೀಪದ ಕಾಡಿಗೆ ಬಿಟ್ಟು ಬಂದಿದ್ದಾರೆ.