ಚಾಮರಾಜನಗರ:ವೇಶ್ಯಾವಾಟಿಕೆ ನಡೆಯುತ್ತಿದ್ದ ಹೋಟೆಲ್ ಮೇಲೆ ದಾಳಿ ನಡೆಸಿ ಮೂವರು ಮಹಿಳೆಯರನ್ನು ರಕ್ಷಿಸಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಗುಂಡ್ಲುಪೇಟೆ ಹೋಟೆಲ್‌ವೊಂದರಲ್ಲಿ ವೇಶ್ಯಾವಾಟಿಕೆ.. 3 ಮಹಿಳೆಯರ ರಕ್ಷಣೆ, ಯುವಕರಿಬ್ಬರ ಬಂಧನ - ಗುಂಡ್ಲುಪೇಟೆ ಸುರಭಿ ಹೋಟೆಲಿನಲ್ಲಿ ವೇಶ್ಯಾವಾಟಿಕೆ ಹಿನ್ನಲೆ ಪೊಲಿಸರಿಂದ ದಾಳಿ
ವೇಶ್ಯಾವಾಟಿಕೆ ನಡೆಯುತ್ತಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿ ಮೂವರು ಮಹಿಳೆಯರನ್ನು ರಕ್ಷಿಸಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.
![ಗುಂಡ್ಲುಪೇಟೆ ಹೋಟೆಲ್‌ವೊಂದರಲ್ಲಿ ವೇಶ್ಯಾವಾಟಿಕೆ.. 3 ಮಹಿಳೆಯರ ರಕ್ಷಣೆ, ಯುವಕರಿಬ್ಬರ ಬಂಧನ prostitution-at-gundlupete-surabhi-hotel](https://etvbharatimages.akamaized.net/etvbharat/prod-images/768-512-5366721-thumbnail-3x2-sanju.jpg)
ಗುಂಡ್ಲುಪೇಟೆ ಸುರಭಿ ಹೋಟೆಲಿನಲ್ಲಿ ವೇಶ್ಯಾವಾಟಿಕೆ
ಖಚಿತ ಮಾಹಿತಿ ಮೇರೆಗೆ ಪಟ್ಟಣದ ಸುರಭಿ ಹೋಟೆಲ್ ಮೇಲೆ ಗುಂಡ್ಲುಪೇಟೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಮೂವರು ಮಹಿಳೆಯರನ್ನು ರಕ್ಷಿಸಿ ಕೇರಳ ಮೂಲದ ಅಬ್ದುಲ್ ರಶೀದ್ ಹಾಗೂ ಕುಮಾರ್ ಎಂಬುವರನ್ನು ಬಂಧಿಸಲಾಗಿದೆ.
ಲಾಟರಿ ಹಾಗೂ ವೇಶ್ಯಾವಾಟಿಕೆ ಅಡ್ಡೆಗಳು ಪಟ್ಟಣದಲ್ಲಿ ಹೆಚ್ಚಾಗಿರುವ ಕುರಿತು ಆರೋಪ ಕೇಳಿ ಬರುತ್ತಿರುವ ನಡುವೆಯೇ ಪಟ್ಟಣದ ಮುಖ್ಯಭಾಗದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿರುವುದು ಕಳವಳಕಾರಿ. ಈ ಕುರಿತು ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:
Prostitution in gundlupete