ಚಾಮರಾಜನಗರ:ರಾಜ್ಯ ಸರ್ಕಾರದ ಶಕ್ತಿ ಯೋಜನೆಯು ಮಹಿಳೆಯರಲ್ಲಿ ಸಂತಸ ಮೂಡಿಸಿದ್ದರೇ, ಖಾಸಗಿ ಬಸ್ ಮಾಲೀಕರಿಗೆ ಸಂಕಷ್ಟ ತಂದಿಟ್ಟಿದೆ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ಸುಮಾರು 70ರಿಂದ 80 ಖಾಸಗಿ ಬಸ್ಗಳು ದಿನನಿತ್ಯ ಸಂಚರಿಸುತ್ತಿವೆ. ಉಚಿತ ಪ್ರಯಾಣದಿಂದ ಮಹಿಳೆಯರು ಸರ್ಕಾರಿ ಬಸ್ಗಳ ಕಡೆ ಮುಖ ಮಾಡಿದ್ದಾರೆ. ಖಾಸಗಿ ಬಸ್ಗಳಲ್ಲಿ ಪ್ರಯಾಣಿಕರು ಬಾರದಿದ್ದರಿಂದ ಖಾಸಗಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದ ದೃಶ್ಯಗಳು ಕಂಡುಬಂದವು.
ಟಂಟಂ, ಖಾಸಗಿ ಬಸ್ಗಳನ್ನು ಆಶ್ರಯಿಸಿದ್ದ ಪ್ರಯಾಣಿಕರು ಈಗ ಕೆಎಸ್ಆರ್ಟಿಸಿ ಬಸ್ಗಳತ್ತ ಮುಖ ಮಾಡಿರುವುದರಿಂದ ಖಾಸಗಿ ಬಸ್ಗಳನ್ನು ಅವಲಂಭಿಸಿ ಜೀವನ ನಡೆಸುತ್ತಿದ್ದವರ ಮೇಲೆ ಗಂಭೀರ ಪರಿಸ್ಥಿತಿ ಉಂಟಾಗಿದೆ. ಪ್ರತಿ ಟ್ರಿಪ್ಗೆ 1800ರಿಂದ 2000 ರೂ. ಸಂಪಾದಿಸುತ್ತಿದ್ದ ಗ್ರಾಮಾಂತರ ಖಾಸಗಿ ಬಸ್ಗಳು ದಿಢೀರನೇ 500ರಿಂದ 600 ರೂ. ಆದಾಯ ಇಳಿದಿದೆ. ಸರ್ಕಾರಿ ಬಸ್ಗಳ ಸೌಲಭ್ಯ ಇಲ್ಲದ ಕಡೆಗೆ ಮಾತ್ರ ಜನರು ಖಾಸಗಿ ಬಸ್ನ್ನು ಆಶ್ರಯಿಸುತ್ತಿದ್ದಾರೆ.
ಖಾಸಗಿ ಬಸ್ ಏಜೆಂಟ್ ರಾಘವೇಂದ್ರ ಮಾತನಾಡಿ, ಶಕ್ತಿ ಯೋಜನೆಯಿಂದ ಚಾಮರಾಜನಗರದ ಖಾಸಗಿ ಬಸ್ ಪುರ್ತಿ ಖಾಲಿಯಾಗಿ ಓಡುತ್ತಿದೆ. ಸೋಮವಾರವಾದ ಇಂದು ಜನ ಕಿಕ್ಕಿರುದು ತುಂಬಬೇಕಿತ್ತು. ಆದರೆ ಇಂದು ಬಸ್ಗಳು ಕಡಿಮೆಯಾಗಿವೆ ಮತ್ತು ಪ್ರಯಾಣಿಕರು ಕಡಿಮೆಯಾಗಿದ್ದಾರೆ. ಖಾಸಗಿ ಬಸ್ಗಳಲ್ಲಿ ಮಹಿಳಾ ಪ್ರಯಾಕರು ತುಂಬಾ ಕಡಿಮೆಯಾಗಿದ್ದಾರೆ. ಎಲ್ಲಿ ಸರ್ಕಾರಿ ಬಸ್ಗಳಿವೋ ಅಲ್ಲಿ ಖಾಸಗಿ ಬಸ್ಗಳು ಓಡುತ್ತಿವೆ ಎಂದರು.
ಮುಖ್ಯವಾದ ಊರುಗಳಾದ ನಂಜನಗೂಡು, ಮೈಸೂರು, ನರಸೀಪುರ, ಗುಂಡ್ಲುಪೇಟೆ, ಕೊಳ್ಳೆಗಾಲಕ್ಕಾಗಲಿ ಪ್ರಯಾಣಿಕರು ಖಾಸಗಿ ಬಸ್ನಲ್ಲಿ ಸಂಚರಿಸಲು ಆಗಮಿಸುತ್ತಿಲ್ಲ. ಮಹಿಳೆಯರಿಂದ ಖಾಸಗಿ ಬಸ್ನಲ್ಲಿ ಪ್ರಯಾಣಿಸುವ ಪುರುಷರ ಸಂಖ್ಯೆಯೂ ಕಡಿಮೆಯಾಗಿದೆ. ಬಸ್ ಖಾಲಿ ಓಡಾಡುತ್ತಿರುವುದರಿಂದ ನಮ್ಮ ಜೀವನಕ್ಕೆ ಕಷ್ಟ ಆಗುತ್ತುದೆ ಎಂದು ಅಳಲು ತೊಡಿಕೊಂಡರು.