ಚಾಮರಾಜನಗರ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಿಲ್ಲಾ ಪ್ರವಾಸ ಹಿನ್ನಲೆ ರಾಷ್ಟ್ರಪತಿ ಅಂಗರಕ್ಷಕರು ಜಿಲ್ಲೆಗೆ ಆಗಮಿಸಿ ಕಟ್ಟೆಚ್ಚರ ವಹಿಸಿದ್ದಾರೆ. ಅಲ್ಲದೇ, ಪೊಲೀಸರಿಗೂ ಕೆಲ ಸೂಚನೆಗಳನ್ನು ಕೊಟ್ಟಿದ್ದಾರೆ.
ಅಂಗರಕ್ಷಕರು(PBG) ಇಂದು ವಾಯುಸೇನೆ ಹೆಲಿಕಾಪ್ಟರ್ ಮೂಲಕ ಚಾಮರಾಜನಗರ ಮತ್ತು ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡಿ ಮೂರು - ನಾಲ್ಕು ಬಾರಿ ಹಾರಾಟ ನಡೆಸಿದ್ದಾರೆ.
ಈಗಾಗಲೇ ಚಾಮರಾಜನಗರ ಮೆಡಿಕಲ್ ಕಾಲೇಜು ಮತ್ತು ಬಿಳಿಗಿರಿರಂಗನ ಬೆಟ್ಟ ಸಮೀಪ ನಿರ್ಮಾಣವಾಗಿರುವ ಹೆಲಿಪ್ಯಾಡ್ಗಳನ್ನು ಪರಿಶೀಲಿಸಿದ್ದಾರೆ. ರಸ್ತೆ ಮಾರ್ಗದಲ್ಲೂ ಸೈನಿಕರು ಟ್ರಯಲ್ ನಡೆಸಿದ್ದಾರೆ. ಬಿಳಿಗಿರಿರಂಗನಬೆಟ್ಟ ದೇವಾಲಯಕ್ಕೆ ರಾಷ್ಟ್ರಪತಿಗಳ ಖಾಸಗಿ ಭೇಟಿಯಾಗಿರುವುದರಿಂದ ಪತ್ರಕರ್ತರ ಪ್ರವೇಶಕ್ಕೆ ಅಂದು ನಿರ್ಬಂಧ ಹೇರಲಾಗಿದೆ.