ಚಾಮರಾಜನಗರ :ಪೊಲೀಸರಿಗೆ ಕೊಡ ಮಾಡುವ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ರಾಷ್ಟ್ರಪತಿ ಪದಕಕ್ಕೆ ನಗರದ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಪುಟ್ಟಸ್ವಾಮಿ ಆಯ್ಕೆಯಾಗಿದ್ದಾರೆ.
ಚಾಮರಾಜನಗರ ಮಹಿಳಾ ಠಾಣೆ ಪಿಐ ಪುಟ್ಟಸ್ವಾಮಿಗೆ ರಾಷ್ಟ್ರಪತಿ ಪದಕ! - Police Officer Puttaswamy
ರೈಸ್ ಪುಲ್ಲಿಂಗ್ ದಂಧೆ ಬೇಧಿಸಿದ್ದು, ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಜನಮನ ಗೆದ್ದಿದ್ದಾರೆ. ಇವರ ಕರ್ತವ್ಯಕ್ಕೆ ಮಾರುಹೋದ ಕೆಲ ಯುವಕರು ಅಭಿಮಾನಿ ಬಳಗ ಕಟ್ಟಿಕೊಂಡು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ..
![ಚಾಮರಾಜನಗರ ಮಹಿಳಾ ಠಾಣೆ ಪಿಐ ಪುಟ್ಟಸ್ವಾಮಿಗೆ ರಾಷ್ಟ್ರಪತಿ ಪದಕ! dsds](https://etvbharatimages.akamaized.net/etvbharat/prod-images/768-512-10372575-thumbnail-3x2-vish.jpg)
ಗಣರಾಜ್ಯೋತ್ಸವ ಮುನ್ನ ದಿನವಾದ ಇಂದು ಬಿಡುಗಡೆಯಾದ ಪದಕ ಪುರಸ್ಕೃತರ ಪಟ್ಟಿಯಲ್ಲಿ ಉತ್ತಮ ಸೇವೆಗಾಗಿ ಬಿ.ಪುಟ್ಟಸ್ವಾಮಿ ಸ್ಥಾನ ಪಡೆದಿದ್ದಾರೆ. ಕೊಳ್ಳೇಗಾಲ, ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪಿಎಸ್ಐ, ಸಿಇಎನ್ ವಿಭಾಗದಲ್ಲಿ ಪಿಐ ಹಾಗೂ ಪ್ರಸ್ತುತ ಚಾಮರಾಜನಗರ ಮಹಿಳಾ ಠಾಣೆಯಲ್ಲಿ ಪಿಐ ಆಗಿ ಜನಸ್ನೇಹಿ ಪೊಲೀಸ್ ಎಂದು ಹೆಸರು ಪಡೆದಿದ್ದಾರೆ.
ರೈಸ್ ಪುಲ್ಲಿಂಗ್ ದಂಧೆ ಬೇಧಿಸಿದ್ದು, ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಜನಮನ ಗೆದ್ದಿದ್ದಾರೆ. ಇವರ ಕರ್ತವ್ಯಕ್ಕೆ ಮಾರುಹೋದ ಕೆಲ ಯುವಕರು ಅಭಿಮಾನಿ ಬಳಗ ಕಟ್ಟಿಕೊಂಡು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ಪುಟ್ಟಸ್ವಾಮಿ ಸಿಎಂ ಪದಕಕ್ಕೂ ಭಾಜನರಾಗಿದ್ದರು.