ಚಾಮರಾಜನಗರ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ 6 ಮಂದಿ ಪ್ರಸೂತಿ ತಜ್ಞರಿದ್ದರೂ ವೈದ್ಯರ ಭೇಟಿಗೆ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕಿತ್ಸೆಗೆ, ಸ್ಕ್ಯಾನಿಂಗ್ ಮುಂತಾದವುಗಳಿಗೆ ಬೆಳಗ್ಗೆ 8 ಗಂಟೆಗೆ ಆಗಮಿಸುವ ಗರ್ಭಿಣಿಯರು ಸುಮಾರು ನಾಲ್ಕು ತಾಸು ವೈದ್ಯರ ಭೇಟಿಗೆ ಸರತಿಯಲ್ಲಿ ಕಾಯುತ್ತಿದ್ದಾರೆ. ಕೆಲ ವೈದ್ಯರು ಕರ್ತವ್ಯದ ಅವಧಿಯಲ್ಲೇ ತಮ್ಮ ಖಾಸಗಿ ಕ್ಲಿನಿಕ್‌ಗಳಿಗೂ ಹೋಗಿಬರುವುದರಿಂದ ಈ ಅವಾಂತರ ಆಗುತ್ತಿದೆ ಎಂದು ಹೇಳಲಾಗಿದೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಗರ್ಭಿಣಿಯರ ಪರದಾಟ: ಬದಲಾಗದ ಆಸ್ಪತ್ರೆಯ ಅವ್ಯವಸ್ಥೆ! - Chamarajanagar district hospital chaos
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಮತ್ತು ಸ್ಕ್ಯಾನಿಂಗ್‌ಗೆ ಆಗಮಿಸುವ ಗರ್ಭಿಣಿಯರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಸ್ಕ್ಯಾನಿಂಗ್ ಮುಂತಾದವುಗಳಿಗೆ ಖಾಲಿ ಹೊಟ್ಟೆಯಲ್ಲಿ ಹೋಗಬೇಕಿರುವುದರಿಂದ ಗರ್ಭಿಣಿಯರು ಕಾದು ಬಸವಳಿಯುತ್ತಿದ್ದಾರೆ ಎಂದು ಸಂಬಂಧಿಗಳು ದೂರಿದ್ದಾರೆ. ಹಾಗಾಗಿ, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ರೋಗಿಗಳ ಸಂಬಂಧಿಕರು ಒತ್ತಾಯಿಸಿದ್ದಾರೆ.

ಸಿಬ್ಬಂದಿ ಕೊರತೆ:ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಸೂತಿ ವಿಭಾಗದ ಮುಖ್ಯಸ್ಥ, ಪ್ರಾಧ್ಯಾಪಕ ಡಾ.ಪ್ರದೀಪ್ ಕುಮಾರ್, 3-4 ವರ್ಷಗಳ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ತಿಂಗಳಿಗೆ ಕೇವಲ 250-300 ಹೆರಿಗೆಗಳಾಗುತ್ತಿದ್ದವು. ಈಗ ಸಂಖ್ಯೆ ದ್ವಿಗುಣಗೊಂಡಿದ್ದು 500-600 ಆಗಿದೆ. 15 ಮಂದಿ ಸಿಬ್ಬಂದಿ ಇರಬೇಕಾದ ಕಡೆ ಕೇವಲ 6 ಮಂದಿ ಸಿಬ್ಬಂದಿ ಇದ್ದಾರೆ. ವಿದ್ಯಾರ್ಥಿಗಳಿಗೆ ಪಾಠ, ಒಳರೋಗಿಗಳ ಭೇಟಿ ಮಾಡಬೇಕಿದ್ದು ಹೊರರೋಗಿಗಳ ಭೇಟಿಗೆ ತಡವಾಗುತ್ತಿದೆ. ಕರ್ತವ್ಯದ ಅವಧಿಯಲ್ಲಿ ವೈದ್ಯರು ಖಾಸಗಿ ಕ್ಲಿನಿಕ್‌ಗಳಿಗೂ ತೆರಳುತ್ತಿರುವುದು ತನಗೆ ತಿಳಿದಿಲ್ಲ ಎಂದರು.
ಇದನ್ನೂಓದಿ :ಸಚಿವ ಈಶ್ವರಪ್ಪ, ಇಬ್ಬರು ಆಪ್ತರ ಮೇಲೆ ಎಫ್ಐಆರ್ ದಾಖಲು