ಚಾಮರಾಜನಗರ : ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯ ಸಮಸ್ಯೆ ತಲೆದೂರಿದ್ದು, ರೋಗಿಗಳು ಮತ್ತು ಆಸ್ಪತ್ರೆ ಸಿಬ್ಬಂದಿ ಪರದಾಡುವಂತಾಗಿದೆ.
ವಿದ್ಯುತ್ ಕಣ್ಣಾಮುಚ್ಚಾಲೆ : ಮೊಬೈಲ್ ಲೈಟ್ ಮೊರೆ ಹೋದ ಕೊಳ್ಳೆಗಾಲ ಆಸ್ಪತ್ರೆ ಸಿಬ್ಬಂದಿ - Patients Suffering from Power problem in Kollegal Subdivision Hospital
ಚಾಮರಾಜನಗರದ ಕೊಳ್ಳೆಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯದಿಂದ ರೋಗಿಗಳು ಮತ್ತು ಆಸ್ಪತ್ರೆ ಸಿಬ್ಬಂದಿ ಪರದಾಡುವಂತಾಗಿದ್ದು, ಮೊಬೈಲ್ ಲೈಟ್ನಲ್ಲಿ ಕಾರ್ಯನಿರ್ವಹಿಸುವಂತಹ ದುಸ್ಥಿತಿ ಎದುರಾಗಿದೆ.
ವಿದ್ಯುತ್ ಕಣ್ಣಾಮುಚ್ಚಾಲೆ
ಪದೇ ಪದೇ ವಿದ್ಯುತ್ ಕೈಕೊಡುತ್ತಿರುವುದರಿಂದ ರೋಗಿಗಳು ಮತ್ತು ಆಸ್ಪತ್ರೆ ಸಿಬ್ಬಂದಿ ಮೊಬೈಲ್ ಲೈಟ್ ಮೊರೆ ಹೋಗಬೇಕಾದ ಪರಿಸ್ಥಿತಿಯಿದ್ದು, ಉಪವಿಭಾಗ ಆಸ್ಪತ್ರೆಯಾಗಿದ್ದರೂ ಕನಿಷ್ಠ ಜನರೇಟರ್ ಸೌಲಭ್ಯವೂ ಇಲ್ಲದಿರುವುದು ಆಸ್ಪತ್ರೆ ದುಸ್ಥಿತಿಗೆ ಸಾಕ್ಷಿಯಾಗಿದೆ.
ವಿದ್ಯುತ್ ಕೈ ಕೊಟ್ಟಾಗಲೆಲ್ಲಾ ಇಲ್ಲಿನ ರೋಗಿಗಳ ಸಂಬಂಧಿಗಳು, ಶುಶ್ರೂಕಿಯರು ಹಾಗೂ ಸಿಬ್ಬಂದಿ ಮೊಬೈಲ್ ಲೈಟ್ ಸಹಾಯದಿಂದಲೇ ಕಾರ್ಯ ನಿರ್ವಹಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿದ್ದಾರೆ.