ಚಾಮರಾಜನಗರ :ರಾಮಮಂದಿರ ನಿರ್ಮಾಣ ನಿಲ್ಲಿಸುವಂತೆ ಚಾಮರಾಜನಗರದಲ್ಲಿ ಎಸ್ಡಿಪಿಐ ಸಂಘಟನೆ ಭಿತ್ತಿಪತ್ರ ಪ್ರದರ್ಶಿಸಿದೆ. ನಗರದ ಎಸ್ಡಿಪಿಐ ಕಚೇರಿ ಮುಂಭಾಗ ಬಿತ್ತಿ ಪತ್ರ ಪ್ರದರ್ಶಿಸಿ, ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿರುವ ಸಂದರ್ಭದಲ್ಲಿ ರಾಮ ಮಂದಿರ ನಿರ್ಮಾಣ ಸರಿಯಲ್ಲ. ದೇಶದ ಮುಸಲ್ಮಾನರ ಹಕ್ಕುಗಳನ್ನ ಕೇಂದ್ರ ಸರ್ಕಾರ ಹತ್ತಿಕ್ಕುತ್ತಿದೆ. ಕೇಂದ್ರ ಸರ್ಕಾರ ಮುಸಲ್ಮಾನರ ಸಂಪ್ರದಾಯಗಳನ್ನ ಕಿತ್ತು ಎಸೆಯುತ್ತಿದೆ. ಬಾಬರಿ ಮಸೀದಿ ದ್ವಂಸ ಅಕ್ರಮ. ಹೀಗಾಗಿ ರಾಮ ಮಂದಿರ ನಿರ್ಮಾಣ ಎಷ್ಟು ಸರಿ ಎಂದು ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.
ರಾಮ ಮಂದಿರ ನಿರ್ಮಾಣ ನಿಲ್ಲಿಸುವಂತೆ ಚಾಮರಾಜನಗರದಲ್ಲಿ ಭಿತ್ತಿಪತ್ರ ಪ್ರದರ್ಶನ - ರಾಮ ಮಂದಿರ ವಿರುದ್ಧ ಆಕ್ರೋಶ
ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿರುವ ಸಂದರ್ಭದಲ್ಲಿ ರಾಮಮಂದಿರ ನಿರ್ಮಾಣ ಸರಿಯಲ್ಲ ಎಂದು ಚಾಮರಾಜನಗರ ಎಸ್ಡಿಪಿಐ ಸಂಘಟನೆ ಭಿತ್ತಿಪತ್ರ ಪ್ರದರ್ಶಿಸಿದೆ..
ರಾಮ ಮಂದಿರ ನಿರ್ಮಾಣ ನಿಲ್ಲಿಸುವಂತೆ ಭಿತ್ತಿಪತ್ರ ಪ್ರದರ್ಶನ
ಇಂದು ದೇಶಾದ್ಯಂತ ಪ್ರತಿಭಟನೆ ನಡೆಯದಂತೆ ನಿಷೇಧಾಜ್ಞೆ ಜಾರಿ ಮಾಡಿರುವ ಕ್ರಮ ಸರಿಯಲ್ಲ, ಕೇಂದ್ರ ಕಾಶ್ಮೀರದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಮುಸ್ಲಿಮರ ಸಾಂವಿಧಾನಿಕ ಹಕ್ಕನ್ನು ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.