ಕೊಳ್ಳೇಗಾಲ (ಚಾಮರಾಜನಗರ): ಜೂಜು ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದು ಎರಡು ಪ್ರತ್ಯೇಕ ಪ್ರಕರಣದಲ್ಲಿ 11 ಮಂದಿಯನ್ನು ಬಂಧಿಸಿದ್ದಾರೆ.
ತಾಲೂಕಿನ ಮುಳ್ಳೂರು ಗ್ರಾಮದ ಹೊರವಲಯದಲ್ಲಿ ಜೂಜಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಅದೇ ಗ್ರಾಮದ ರವಿ, ಅಶೋಕ್, ಸಿದ್ದರಾಜು, ಮಾದೇಶ, ರಾಜಣ್ಣ, ಗುರುರಾಜು, ಮಹೇಶ್ ಹಾಗೂ ಕಾಮರಾಜು ಎಂಬುವವರನ್ನು ಬಂಧಿಸಿದ್ದಾರೆ. ಜೊತೆಗೆ 7,450 ರೂ. ವಶಪಡಿಸಿಕೊಂಡಿದ್ದಾರೆ.