ಕೊಳ್ಳೇಗಾಲ:ಬಡವರಿಗಾಗಿ ಸರ್ಕಾರದಿಂದ ವಿತರಣೆಯಾಗುತ್ತಿರುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಖರೀದಿಸಿ ರಾಜಾರೋಷವಾಗಿ ಬೈಕ್ನಲ್ಲಿ ಹೊತ್ತೊಯ್ಯುತ್ತಿದ್ದ ಆರೋಪಿಗಳನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಕ್ರಮವಾಗಿ ಪಡಿತರ ಹೊತ್ತೊಯ್ಯುವಾಗ ಪೊಲೀಸರ ದಾಳಿ ಮಳವಳ್ಳಿ ತಾಲ್ಲೂಕಿನ ಬಸವರಾಜು, ಕೃಷ್ಣ ಹಾಗೂ ಕೊಳ್ಳೇಗಾಲದ ಬಾಬು ಬಂಧಿತರು. ಇವರಿಂದ 8 ಮೂಟೆ ಪಡಿತರ, 3 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಕೊಳ್ಳೇಗಾಲದ ಸುತ್ತಮುತ್ತಲಿನಲ್ಲಿ ಬಡವರಿಂದ ಪಡಿತರವನ್ನು ಹೆಚ್ಚಿನ ಬೆಲೆಗೆ ಖರೀದಿಸಿ ಮಳವಳ್ಳಿ ಕಡೆಗೆ ಸಾಗಿಸಲು ದಾಸನಪುರ ಸೇತುವೆ ಮಾರ್ಗವಾಗಿ ಬೈಕ್ಗಳಲ್ಲಿ ತೆರಳುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿದ ಸಬ್ ಇನ್ಸ್ಪೆಕ್ಟರ್ ವಿ.ಚೇತನ್ ತಮ್ಮ ತಂಡದೊಂದಿಗೆ ದಿಢೀರ್ ದಾಳಿ ನಡೆಸಿ ಮೂವರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ.
ಈ ಸಂಬಂಧ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.