ಚಾಮರಾಜನಗರ: ರಾತ್ರಿ ಮಲಗಿದ್ದ ವ್ಯಕ್ತಿವೋರ್ವ ಬೆಳಗಾಗುವುದರೊಳಗೆ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಕೊಳ್ಳೇಗಾಲ ತಾಲೂಕಿನ ಮಲ್ಲಳ್ಳಿ ಗ್ರಾಮದಲ್ಲಿ ನಡೆದಿದೆ.
ಅಪರಿಚಿತನ ಫೋನ್ ಕರೆ... ಶವಸಂಸ್ಕಾರದ ವೇಳೆಗೆ ಪೊಲೀಸರ ದಿಢೀರ್ ಎಂಟ್ರಿ! - chamrajnagar latest crime news
ವ್ಯಕ್ತಿವೋರ್ವ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಕೊಳ್ಳೇಗಾಲ ತಾಲೂಕಿನ ಮಲ್ಲಳ್ಳಿಗ್ರಾಮದಲ್ಲಿ ನಡೆದಿದೆ. ಇನ್ನೇನು ಶವ ಸಂಸ್ಕಾರಕ್ಕೆ ಎಲ್ಲ ಸಿದ್ಧತೆ ನಡೆದಿತ್ತು. ಆಗ ಅಪರಿಚಿತನೋರ್ವ ಫೋನ್ ಕರೆ ಮಾಡಿದ್ದರಿಂದ ಪೊಲೀಸರು ದಿಢೀರ್ ಸ್ಥಳಕ್ಕೆ ಆಗಮಿಸಿದ್ರು.
![ಅಪರಿಚಿತನ ಫೋನ್ ಕರೆ... ಶವಸಂಸ್ಕಾರದ ವೇಳೆಗೆ ಪೊಲೀಸರ ದಿಢೀರ್ ಎಂಟ್ರಿ! death](https://etvbharatimages.akamaized.net/etvbharat/prod-images/768-512-5401982-thumbnail-3x2-surya.jpg)
ವ್ಯಕ್ತಿ ಅನುಮಾನಸ್ಪದ ಸಾವು
ಗ್ರಾಮದ ನಿಂಗರಾಜು(40) ಮೃತ ವ್ಯಕ್ತಿ. ಈತನನ್ನು ಯಾರೋ ಕೊಲೆ ಮಾಡಿದ್ದಾರೆಂದು ಆರೋಪಿಸಿ ಅಪರಿಚಿತ ವ್ಯಕ್ತಿವೋರ್ವ ಡಿವೈಎಸ್ಪಿ ನವೀನ್ ಕುಮಾರ್ ಅವರಿಗೆ ಫೋನ್ ಕರೆ ಮಾಡಿದ ಹಿನ್ನೆಲೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತನ ಸಂಬಂಧಿಕರಿಂದ ಹೇಳಿಕೆ ಪಡೆದಿದ್ದಾರೆ.
ವ್ಯಕ್ತಿ ಅನುಮಾನಾಸ್ಪದ ಸಾವು
ಶವ ಸಂಸ್ಕಾರ ಮಾಡುವ ಸಮಯಕ್ಕೆ ಎಂಟ್ರಿ ಕೊಟ್ಟ ಪೊಲೀಸರು, ಪರಿಶೀಲನೆ ನಡೆಸಿ ಮೃತನ ಕುತ್ತಿಗೆಯಲ್ಲಿ ನೇಣು ಬಿಗಿದ ಗುರುತನ್ನು ಪತ್ತೆಹಚ್ಚಿ ಸೀರೆಯೊಂದನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.