ಕರ್ನಾಟಕ

karnataka

ETV Bharat / state

ಹೆಲ್ಮೆಟ್ ಹಾಕದೇ ಬಂದರೆ ದಂಡ ಕಟ್ಟಬೇಕಿಲ್ಲ, ಹೆಲ್ಮೆಟ್ ತಗೋಬೇಕು ಇದು ಪೊಲೀಸರ‌ ರೂಲ್ಸ್ - ಹೆಲ್ಮೆಟ್ ನೀಡಿದ ಪೊಲೀಸರು

ಹೆಲ್ಮೆಟ್ ಹಾಕದೇ ಬರೋ ವಾಹನ ಸವಾರರಿಗೆ ಕೊಳ್ಳೇಗಾಲ ಪೊಲೀಸರು ದಂಡ ಹಾಕುವ ಬದಲು ಹೆಲ್ಮೆಟ್ ನೀಡುತ್ತಿದ್ದಾರೆ.

helmet
helmet

By

Published : Apr 30, 2021, 9:04 PM IST

Updated : Apr 30, 2021, 9:55 PM IST

ಕೊಳ್ಳೇಗಾಲ: ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡ್ಕೊಂಡು ಹೊರಗೆ ಬರುವವರಿಗೆ ದಂಡ ಹಾಕುವ ಬದಲು ಪಟ್ಟಣ ಪೊಲೀಸರು ಹೆಲ್ಮೆಟ್ ನೀಡುತ್ತಿದ್ದಾರೆ.

ನಗರದ ವಿವಿಧೆಡೆಗಳಲ್ಲಿ ಪಿಎಸ್ಐ‌ ತಾಜುದ್ದೀನ್ ತಂಡ ಹೆಲ್ಮೆಟ್ ರಹಿತ ಸವಾರರನ್ನು ಅಡ್ಡಗಟ್ಟಿ ದಂಡ ವಿಧಿಸುವ ಬದಲಿಗೆ ಹೆಲ್ಮೆಟ್ ನೀಡುತ್ತಿದ್ದು, ದಂಡ ಕಟ್ಟುವ ಹಣದಿಂದ ಜನರು ಹೆಲ್ಮೆಟ್ ಖರೀದಿ ಮಾಡಿದರು. ಒಂದು ಕಡೆ ನಿಯಮ ಪಾಲನೆಮಾಡಿಸಬೇಕೆಂಬ ಉದ್ದೇಶದಿಂದ ಈ ರೀತಿ ಪೊಲೀಸರು ಮಾಡುತ್ತಿದ್ದು,‌ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಹೆಲ್ಮೆಟ್ ಹಾಕದೇ ಬಂದರೆ ದಂಡ ಕಟ್ಟಬೇಕಿಲ್ಲ, ಹೆಲ್ಮೆಟ್ ತಗೋಬೇಕು ಇದು ಪೊಲೀಸರ‌ ರೂಲ್ಸ್

ಇನ್ನು ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸುವ ಹಿನ್ನೆಲೆ ಸರ್ಕಾರ ವಿವಿಧ ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಮುಂದುವರಿದು ಜನತಾ ಕರ್ಫ್ಯೂಗೆ ಆದೇಶ ನೀಡಿದೆ. ಆದರೆ, ಎಚ್ಚತ್ತು ಕೊಳ್ಳದ ಕೆಲ ಜನರು ಸುಖಾಸುಮ್ಮನೆ ಓಡಾಟ ಮಾಡುತ್ತಿದ್ದು ಅಂತವರನ್ನು‌ ಗಮನಿಸಿದ ಪೊಲೀಸರು ದಂಡ ವಿಧಿಸಿದ್ದಾರೆ.

ರಾಜ್ಯದಲ್ಲಿ ಮೇ 10 ರವರೆಗೆ ಜನತಾ ಕರ್ಫ್ಯೂ ಹೇರಲಾಗಿದ್ದು, ಬೆಳೆಗ್ಗೆ 6 ರಿಂದ 10 ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವನ್ನು ಸರ್ಕಾರ ಮಾಡಿ ಕೊಟ್ಟಿದೆ. ಪರಿಸ್ಥಿತಿ ಇಂತಹ ಭೀಕರತೆ ಸೃಷ್ಟಿಸಿದ್ದರೂ ಕೆಲ ಜನರು ಮಾತ್ರ ಇನ್ನೂ ಎಚ್ಚೆತ್ತುಕೊಳ್ಳದೇ ಅನಗತ್ಯ ಸಂಚಾರಿಗಳಾಗಿದ್ದಾರೆ.

Last Updated : Apr 30, 2021, 9:55 PM IST

ABOUT THE AUTHOR

...view details