ಚಾಮರಾಜನಗರ: ಜಿಲ್ಲೆಯಲ್ಲಿ ಗಣಪತಿ ಮಂಡಳಿಯು ಕಳೆದ 57 ವರ್ಷಗಳಿಂದ ವಿಶೇಷ ಗಣಪ ಮೂರ್ತಿಗಳನ್ನು ಸ್ಥಾಪಿಸಿಕೊಂಡು ಬರುತ್ತಿದ್ದಾರೆ. ಈ ಬಾರಿ ಹಸುವಿನ ಬಳಿ ನಿಂತು ಕೊಳಲನ್ನು ಊದುತ್ತಿರುವ ಗೊಲ್ಲನ ರೀತಿ ಗಣಪನ ಮೂರ್ತಿಯನ್ನು ಟಿ.ನರಸೀಪುರದಿಂದ ತರಿಸಲಾಗಿದೆ. ಇದೇ ತಿಂಗಳ 30 ರಂದು ಗಣಪತಿ ನಿಮಜ್ಜನ ಮಹೋತ್ಸವ ನಡೆಯಲಿದೆ.
ಪೊಲೀಸ್ ಗಣಪನೆಂದೇ ಪ್ರಸಿದ್ಧಿ
ನಿಮಜ್ಜನದ ವೇಳೆ ಅನ್ಯ ಕೋಮಿನ ಪ್ರಾರ್ಥನಾ ಮಂದಿರದ ಎದುರು ಹಾದುಹೋಗುವ ವಿಚಾರದಲ್ಲಿ ವಿವಾದವೆದ್ದು ಸುಪ್ರೀಂ ಕೋರ್ಟ್ ನಲ್ಲಿ ಈ ಗಣಪತಿ ಪ್ರಕರಣ ಇತ್ಯರ್ಥವಾಗಿದೆ. ಗಣಪನ ಉತ್ಸವಕ್ಕೆ ಅವಕಾಶ ಕಲ್ಪಿಸಬೇಕೆಂದು ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರು ಸಂಸತ್ತಿನಲ್ಲಿ ಧ್ವನಿ ಎತ್ತಿರುವುದು ಈ ಗಣಪನ ಹೆಗ್ಗಳಿಕೆಯಾಗಿದೆ.