ಕರ್ನಾಟಕ

karnataka

ETV Bharat / state

ಡ್ರೋನ್‌ನಲ್ಲಿ ಅರಿವು ಮೂಡಿಸಿದರೂ ಡೋಂಟ್‌ ಕೇರ್.. ರಸ್ತೆಗಿಳಿದು ಫೈನ್ ಹಾಕಿದ ಪೊಲೀಸರು!! - chintamani police news

ನಗರದ ತಾಲೂಕು ಕಚೇರಿ ಮುಂಭಾಗ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಅನಾವಶ್ಯಕವಾಗಿ ಓಡಾಡುತ್ತಿದ್ದ ವಾಹನ ಸವಾರರನ್ನು ಹಿಡಿದು ದಂಡ ವಿಧಿಸಿ ವಾಹನದ ಪರವಾನಿಗೆ ರದ್ದು ಮಾಡುತ್ತೇವೆಂದು ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದ್ದಾರೆ.

By

Published : May 12, 2020, 5:57 PM IST

ಚಿಂತಾಮಣಿ : ನಗರದಲ್ಲಿ ಮೂರು ಕೋವಿಡ್‌-19 ಪ್ರಕರಣ ಪತ್ತೆಯಾಗಿದ್ದರೂ ಸಾರ್ವಜನಿಕರ‌ ಓಡಾಟದಲ್ಲಿ ಕಡಿಮೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ರಸ್ತೆಗಿಳಿದು ಫೈನ್ ಹಾಕಿ ವಾಹನಗಳ ಪರವಾನಗಿ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಗರದ ತಾಲೂಕು ಕಚೇರಿ ಮುಂಭಾಗ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಅನಾವಶ್ಯಕವಾಗಿ ಓಡಾಡುತ್ತಿದ್ದ ವಾಹನ ಸವಾರರನ್ನು ಹಿಡಿದು ದಂಡ ವಿಧಿಸಿ ವಾಹನದ ಪರವಾನಿಗೆ ರದ್ದು ಮಾಡುತ್ತೇವೆಂದು ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದ್ದಾರೆ.

ಸದ್ಯ ಕೊರೊನಾ ಸೋಂಕಿತರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡ್ರೋನ್ ಕ್ಯಾಮೆರಾಗೆ ಧ್ವನಿವರ್ಧಕಗಳನ್ನು ಅಳವಡಿಸಿ ಮನೆಯಿಂದ ಹೊರಗೆ ಬರದಂತೆ ಎಚ್ಚರಿಕೆ ನೀಡಾಲಾಗುತ್ತಿದೆ. ಆದರೂ ಅನಾವಶ್ಯಕವಾಗಿ ಓಡಾಟ ನಿಲ್ಲದ ಕಾರಣ ಪೊಲೀಸರು ರಸ್ತೆಗಿಳಿದು ಫೈನ್ ಹಾಕಲು ಮುಂದಾಗಿದ್ದಾರೆ.

ABOUT THE AUTHOR

...view details