ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಲ್ಲಿ ಪೊಲೀಸರು ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿ ಚಿನ್ನದ ರಥ ಎಳೆದ ವಿಶಿಷ್ಟ ಘಟನೆ ನಡೆದಿದೆ .
ಮಾದಪ್ಪನ ಬೆಟ್ಟದಲ್ಲಿ ಚಿನ್ನದ ರಥ ಎಳೆದ ಪೊಲೀಸರು - kannadanews
ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಸಾಮೂಹಿಕವಾಗಿ ವಿಶೇಷ ಮಾದಪ್ಪನಿಗೆ ಪೂಜೆ ಸಲ್ಲಿಸಿದ್ದಾರೆ.
ಮಾದಪ್ಪನ ಬೆಟ್ಟದಲ್ಲಿ ಚಿನ್ನದ ರಥ ಎಳೆದ ಪೊಲೀಸರು
ಮಲೆಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪಿಐ, ಪಿಎಸ್ಐ ಹಾಗೂ ಸಿಬ್ಬಂದಿ ಮಲೆ ಮಹದೇಶ್ವರ ಸ್ವಾಮಿಗೆ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿ ಬೆಳ್ಳಿ ದಂಡ ಹಿಡಿದು ಚಿನ್ನದ ರಥವನ್ನು ಎಳೆದು ದೇವರ ಕೃಪೆಗೆ ಪಾತ್ರರಾದರು.
ಸದಾ ಮಾದಪ್ಪನ ಭಕ್ತರು ಹಾಗೂ ಇನ್ನಿತರ ಗ್ರಾಮಗಳ ಜನತೆಯ ರಕ್ಷಣೆಗೆ ಖಾಕಿ ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಬೆಟ್ಟದ ಪೊಲೀಸರು ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸುವ ಪ್ರಯುಕ್ತ ಖಾಕಿ ಸಮವಸ್ತ್ರದ ಬದಲು ಬಿಳಿ ಪಂಚೆ ಮತ್ತು ಶರ್ಟ್ ತೊಟ್ಟು ಇಳಿ ಸಂಜೆ ಮಾದಪ್ಪನ ಸನ್ನಿಧಿಯಲ್ಲಿ ಮಿಂಚಿದ್ರು.
Last Updated : Jul 8, 2019, 10:47 PM IST