ಕರ್ನಾಟಕ

karnataka

ETV Bharat / state

ದೂರು ಕೊಡಲು ಊಟ ಮಾಡದೇ ಬಂದ ಮಹಿಳೆ: ಕೊಳ್ಳೇಗಾಲದಲ್ಲಿ ಎಸ್ಪಿ ಮಾಡಿದ್ದೇನು ಗೊತ್ತಾ!? - undefined

ಅಳಲು ತೋಡಿಕೊಳ್ಳಲು ಊಟ ಮಾಡದೇ ಬಂದ ಮಹಿಳೆಯೋರ್ವರಿಗೆ ಮೊದಲು ಊಟ ಮಾಡಿ ಎಂದು 100 ರೂ. ಕೊಟ್ಟು ಸಮಸ್ಯೆ ಪರಿಹರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್‌.ಡಿ‌.ಆನಂದಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಎಸ್ಪಿ

By

Published : Jul 15, 2019, 11:44 PM IST

ಚಾಮರಾಜನಗರ:ಬಾಣಂತಿಯೊಬ್ಬರಿಗೆ ಆಟೋ ಹಿಡಿದು ಮನೆ ತಲುಪಿಸುವ ಕಾರ್ಯ ಮಾಡಿದ್ದ ಪೊಲೀಸ್ ಪೇದೆಯ ಕಾರ್ಯದ ರೀತಿಯೇ ಇಂದು ಪೊಲೀಸ್ ವರಿಷ್ಠಾಧಿಕಾರಿ ಮಾಡಿ ಎಲ್ಲರ ಮನ ಗೆದ್ದಿದ್ದಾರೆ.

ಹೌದು, ಅಳಲು ತೋಡಿಕೊಳ್ಳಲು ಊಟ ಮಾಡದೇ ಬಂದ ಮಹಿಳೆಯೋರ್ವರಿಗೆ ಮೊದಲು ಊಟ ಮಾಡಿ ಎಂದು 100 ರೂ. ಕೊಟ್ಟು ಸಮಸ್ಯೆ ಪರಿಹರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್‌.ಡಿ‌.ಆನಂದಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದ ಘಟನೆ ಕೊಳ್ಳೇಗಾಲದಲ್ಲಿ ನಡೆಯಿತು.

ಏನದು ಘಟನೆ:

ಹನೂರಿನ ಜಿ.ವಿ‌.ಗೌಡ ಬಡಾವಣೆ ನಿವಾಸಿ ಲಕ್ಷ್ಮಮ್ಮ ಎಂಬವರು ತಮ್ಮ ಅಣ್ಣನ ಮಗ ಮಂಜು ಎಂಬಾತನಿಗೆ 3 ಲಕ್ಷ ರೂ. ಸಾಲ ನೀಡಿದ್ದಾರೆ. ಆದರೆ, ಈಗ ಸಾಲ ಪಡೆದಾತ ಹಣವನ್ನೇ ನೀಡಿಲ್ಲ ಎಂದು ಮೋಸ ಮಾಡಿದ್ದಾನೆ ಎನ್ನುವುದು ಮಹಿಳೆ ಆರೋಪ. ಸಾಲ ನೀಡಿದ್ದಕ್ಕೆ ಲಕ್ಷ್ಮಮ್ಮ ಬಳಿ ಯಾವುದೇ ದಾಖಲೆ ಇರದಿದ್ದರಿಂದ ಹನೂರು ಠಾಣೆ ಪೊಲೀಸರು ಇದು ಸಿವಿಲ್ ವ್ಯಾಜ್ಯ ಎಂದು ಕೈ ಚೆಲ್ಲಿದ್ದಾರೆ ಎನ್ನಲಾಗಿದೆ.

ಮಹಿಳೆಗೆ 100 ರೂ. ಕೊಟ್ಟ ಎಸ್ಪಿ

ಇದರಿಂದ ಇಂದು ಕೊಳ್ಳೇಗಾಲ ಡಿವೈಎಸ್​​ಪಿ ಕಾಣಲು ಬಂದ ವೇಳೆ ಎಸ್​​ಪಿ ಅವರೇ ಎದುರಾಗಿದ್ದರಿಂದ ಅಳಲು ತೋಡಿಕೊಂಡಿದ್ದಾರೆ. ಬಳಿಕ, ಊಟ ಮಾಡಿದಿರಾ ಎಂಬ ಪ್ರಶ್ನೆಗೆ ಇಲ್ಲ ಎಂದಾಗ 100 ರೂ. ನೀಡಿ ಊಟ ಮಾಡಿ ಮೊದಲು ಎಂದು ಹೇಳಿ ಸಮಸ್ಯೆ ಪರಿಹರಿಸಲು ಕೊಳ್ಳೇಗಾಲ ಸಿಪಿಐ ಶ್ರೀಕಾಂತ್ ಅವರಿಗೆ ಸೂಚಿಸಿ ಮಹಿಳೆಗೆ ಸಾಂತ್ವನ ಹೇಳಿ ಜನಸ್ನೇಹಿ ಪೊಲೀಸ್ ಎನ್ನುವುದನ್ನು ಸಾರಿದ್ದಾರೆ.

For All Latest Updates

TAGGED:

ABOUT THE AUTHOR

...view details