ಕೊಳ್ಳೇಗಾಲ,(ಚಾಮರಾಜನಗರ) :ಲಾಕ್ಡೌನ್ ವೇಳೆ ಜೂಜಾಟಕ್ಕಿಳಿದಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಕ್ಕಡಹಳ್ಳಿ, ತೇರಂಬಳ್ಳಿ, ಮಧುವನ ಹಳ್ಳಿ ಗ್ರಾಮಗಳ ಜಮೀನುಗಳಲ್ಲಿ ಜೂಜಾಟಕ್ಕೆ ಇಳಿಯುತ್ತಿದ್ದ ಗುಂಪಿನ ಮೇಲೆ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ವಿ ಸಿ ಅಶೋಕ್ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿತು. 39,110 ರೂಪಾಯಿಗಳನ್ನು ವಶಪಡಿಸಿಕೊಂಡು 25 ಮಂದಿಯ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.
ಜೂಜು ಅಡ್ಡೆ ಮೇಲೆ ದಿಢೀರ್ ದಾಳಿ.. ₹39,110 ಸೀಜ್, 25 ಮಂದಿಯ ಮೇಲೆ ಎಫ್‌ಐಆರ್..
ಲಾಕ್ಡೌನ್ ಇದ್ರೂ ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಗುಂಪೊಂದು ಜೂಜಾಟಕ್ಕೆ ತೊಡಗಿತ್ತು. ಆದ್ರೀಗ ಪೊಲೀಸರ ಬಲೆಗೆ ಬಿದ್ದಿದೆ.
ಜೂಜುಕೋರರ ಮೇಲೆ ದಿಢೀರ್ ದಾಳಿ: 39,110 ರೂ. ವಶ, 25 ಮಂದಿಯ ಮೇಲೆ ಎಫ್.ಐ.ಆರ್
ದೇಶಾದ್ಯಂತ ಲಾಕ್ಡೌನ್ ಆದೇಶವಿದೆ. ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ಇವೆಲ್ಲದಕ್ಕೂ ತಲೆ ಕೆಡಿಸಿಕೊಳ್ಳದ ಗುಂಪೊಂದು ಸಾರ್ವಜನಿಕ ಸ್ಥಳಗಳಲ್ಲೇ ಜೂಜಾಟಕ್ಕಿಳಿದಿದ್ದಾರೆ. ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಕಾನೂನು ಬಾಹಿರವಾಗಿ ಜೂಜಾಟಕ್ಕೆ ಇಳಿದಿದ್ದ ಜೂಜುಕೋರರ ಹೆಡೆಮುರಿಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.