ಚಾಮರಾಜನಗರ:ಕೊಳ್ಳೇಗಾಲದ ಶಿವನಸಮುದ್ರದ ಬಳಿಯಿರುವ ಕಾವೇರಿ ನದಿ ತೀರದಲ್ಲಿ ಯಾವುದೇ ಅನುಮತಿ ಇಲ್ಲದಿದ್ದರೂ ಟ್ರಾಕ್ಟರ್ನಲ್ಲಿ ಮರಳು ಸಾಗಾಣೆ ಮಾಡಲಾಗುತ್ತಿದೆ.
ಅಕ್ರಮ ಮರಳು ಅಡ್ಡೆ ಮೇಲೆ ದಾಳಿ..ಟ್ರಾಕ್ಟರ್ ಬಿಟ್ಟು ಚಾಲಕ ಪರಾರಿ
ಕೊಳ್ಳೇಗಾಲದ ಶಿವನಸಮುದ್ರದ ಬಳಿಯಿರುವ ಕಾವೇರಿ ನದಿ ತೀರದಲ್ಲಿ ಮರಳು ಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು,ಟ್ರಾಕ್ಟರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ಅಕ್ರಮ ಅಡ್ಡೆ ಮೇಲೆ ದಾಳಿ..ಟ್ರಾಕ್ಟರ್ ಬಿಟ್ಟು ಚಾಲಕ ಪರಾರಿ
ಈ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು,ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ನ ಕಡೆಗದ್ದೆ ದೊಡ್ಡಿ ಗ್ರಾಮದ ದಂಡಿಮಾದಯ್ಯರವರ ಮಗ ಕೃಷ್ಣ ಅಲಿಯಾಸ್ ಚಂಗು ಪರಾರಿಯಾದ ಆರೋಪಿಯಾಗಿದ್ದು,ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸದ್ಯ ಟ್ರಾಕ್ಟರ್ ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.