ಚಾಮರಾಜನಗರ: ಆನೆ ದಂತವನ್ನು ಬಚ್ಚಿಟ್ಟಿದ್ದ ವ್ಯಕ್ತಿಯೊಬ್ಬನನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಣ್ಣೀಯನಪುರ ಕಾಲೋನಿಯಲ್ಲಿ ನಡೆದಿದೆ. ಕೇರಳ ಮೂಲದ ಬಾಲನ್ (54) ಬಂಧಿತ ವ್ಯಕ್ತಿ.
ಹೇಳುತ್ತಿದ್ದದ್ದು ದನದ ವ್ಯಾಪಾರ, ಮಾಡುತ್ತಿದ್ದದ್ದು ಆನೆ ದಂತ ಮಾರಾಟ: ಕೊನೆಗೂ ಸಿಕ್ಕಿಬಿದ್ದ ಐನಾತಿ - ಗುಂಡ್ಲುಪೇಟೆ ಪೋಲಿಸ್ ಠಾಣೆ
ದನದ ವ್ಯಾಪಾರದ ಜೊತೆ ಅಕ್ರಮವಾಗಿ ಆನೆ ದಂತಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ.
ಆನೆ ದಂತ
ಈತ ದನದ ವ್ಯಾಪಾರದ ಜೊತೆ ಅಕ್ರಮವಾಗಿ ಆನೆ ದಂತಗಳನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ತಮಿಳುನಾಡು ಹಾಗೂ ಕೇರಳದಲ್ಲಿ ಈತನ ವ್ಯಾಪಾರ - ವಹಿವಾಟಿನ ಮೇಲೆ ಕಣ್ಣಿಟ್ಟಿದ್ದ ರಾಜ್ಯದ ಪೊಲೀಸರು, ಮಾಹಿತಿ ಸಂಗ್ರಹಿಸಿ ಆರೋಪಿಯನ್ನ ಬಂಧಿಸಿದ್ದಾರೆ. ಬಾಲನ್ನಿಂದ 3 ಕೆ.ಜಿಗೂ ಹೆಚ್ಚು ತೂಕದ 3 ಆನೆ ದಂತಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಗುಂಡ್ಲುಪೇಟೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ನೂಪುರ್ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಹಿಂಸಾಚಾರ ಹೆಚ್ಚಳ ಸಾಧ್ಯತೆ: ಹೈ ಅಲರ್ಟ್ ಆದ ರಾಜ್ಯ ಪೊಲೀಸರು