ಕರ್ನಾಟಕ

karnataka

ETV Bharat / state

ಒಂದಲ್ಲ ಎರಡಲ್ಲ... ಆ ಕೊಳಕು ಮಂಡಲ ಹಾಕಿದ್ದ ಮರಿಗಳೆಷ್ಟು ಗೊತ್ತಾ? - undefined

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಮೀಪದಲ್ಲಿ ಕಂಡು ಬಂದಂತಹ ವಿಷಕಾರಿಯಾದ ಕೊಳಕಮಂಡಲ ಹಾವನ್ನು ಉರಗ ಪ್ರೇಮಿ ಸ್ನೇಕ್ ಚಾಂಪ್ ಸುರಕ್ಷಿವಾಗಿ ಕಾಡಿಗೆ ಬಿಟ್ಟಿದ್ದಾರೆ.

ಉರಗ ಪ್ರೇಮಿಯಾದ ಸ್ನೇಕ್ ಚಾಂಪ್

By

Published : May 25, 2019, 5:19 PM IST

ಚಾಮರಾಜನಗರ:ವಿಷಕಾರಿಯಾದ ಕೊಳಕಮಂಡಲ ಹಾವನ್ನು ಮತ್ತು ಅದರ 30 ಮರಿಗಳನ್ನು ರಕ್ಷಸಿ ಕಾಡಿಗೆ ಬಿಟ್ಟರುವ ಘಟನೆ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಮೀಪದಲ್ಲಿ ನಡೆದಿದೆ.

ಉರಗ ಪ್ರೇಮಿ ಸ್ನೇಕ್ ಚಾಂಪ್ ಅವರು ರಕ್ಷಿಸಿದ್ದ ಕೊಳಕಮಂಡಲ ಹಾವನ್ನು ಡಬ್ಬಿಯಲ್ಲಿ ಹಾಕಿ ಇಟ್ಟಿದ್ದರು. ಅದು ಸುಮಾರು 30 ಮರಿಗಳನ್ನು ಹಾಕಿತ್ತು. ಈ ಎಲ್ಲ ಹಾವುಗಳನ್ನು ಕೆ.ಗುಡಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಸ್ನೇಕ್ ಚಾಂಪ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಕೊಳಕುಮಂಡಲ ಹಾವನ್ನು ರಕ್ಷಿಸಿದ ಉರಗ ತಜ್ಞ

ಈ ಕುರಿತು 'ಈಟಿವಿ ಭಾರತ್​'ನೊಂದಿಗೆ ಸ್ನೇಕ್ ಚಾಂಪ್ ಮಾತನಾಡಿ, ನನಗೆ ಇಂದು ಪೊಲೀಸ್​ ಕಚೇರಿ ಸಮೀಪದಲ್ಲಿ ಕೊಳಕಮಂಡಲ ಹಾವು ಸಿಕ್ಕಿತ್ತು. ಅದು ಸುಮಾರು ಎರಡು ಗಂಟೆಯಲ್ಲೆ 30 ಮರಿಗಳನ್ನು ಹಾಕಿತ್ತು. ಈ ಹಾವುಗಳು ಅಳಿವಿನಂಚಿನಲ್ಲಿದ್ದು, ಇದು ತುಂಬಾ ವಿಷಕಾರಿಯಾದ ಹಾವಾಗಿದೆ. ಇವು ಕಾಡಂಚಿನ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇವುಗಳನ್ನು ಸುರಕ್ಷಿವಾಗಿ ಕಾಡಿಗೆ ಬಿಡಲಾಗಿದೆ ಎಂದರು.

For All Latest Updates

TAGGED:

ABOUT THE AUTHOR

...view details