ಕರ್ನಾಟಕ

karnataka

ETV Bharat / state

ಎಂಎಲ್ಎ ಎಲೆಕ್ಷನ್ ಮೇಲೆ ಕಣ್ಣಿಟ್ಟಿದ್ದ ನಗರದ ಪಿಐ ಎತ್ತಂಗಡಿ: ಎನ್​ ಮಹೇಶ್ ವಿರುದ್ಧ ಕಿಡಿ - ಎನ್​ ಮಹೇಶ್ ವಿರುದ್ಧ ಕಿಡಿಕಾರಿದ ಕೊಳ್ಳೇಗಾಲ ನೆಟ್ಟಿಗರು

ಚಾಮರಾಜನಗರ ಗ್ರಾಮಾಂತರ ಠಾಣೆ ಪಿಐ ಆಗಿದ್ದ ಪುಟ್ಟಸ್ವಾಮಿ ಅವರನ್ನು ಮೈಸೂರಿಗೆ ವರ್ಗಾವಣೆ ಮಾಡಲಾಗಿದ್ದು, ಇವರ ಜಾಗಕ್ಕೆ ಚಿಕ್ಕರಾಜ ಶೆಟ್ಟಿ ಎಂಬವರು ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.

ಎಂಎಲ್ಎ ಎಲೆಕ್ಷನ್ ಮೇಲೆ ಕಣ್ಣಿಟ್ಟಿದ್ದ ನಗರದ ಪಿಐ ಎತ್ತಂಗಡಿ
ಎಂಎಲ್ಎ ಎಲೆಕ್ಷನ್ ಮೇಲೆ ಕಣ್ಣಿಟ್ಟಿದ್ದ ನಗರದ ಪಿಐ ಎತ್ತಂಗಡಿ

By

Published : Jul 21, 2022, 5:48 PM IST

Updated : Jul 21, 2022, 6:50 PM IST

ಚಾಮರಾಜನಗರ: ಅಧಿಕಾರಿಗಳ ವರ್ಗಾವಣೆ ಸಾಮಾನ್ಯ ಪ್ರಕ್ರಿಯೆಯಾದರೂ ಶಾಸಕರೊಬ್ಬರ ಮೇಲೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರುತ್ತಿರುವುದು ಜೋರಾಗಿದೆ.

ಚಾಮರಾಜನಗರ ಗ್ರಾಮಾಂತರ ಠಾಣೆ ಪಿಐ ಆಗಿದ್ದ ಪುಟ್ಟಸ್ವಾಮಿ ಅವರನ್ನು ಮೈಸೂರಿಗೆ ವರ್ಗಾವಣೆ ಮಾಡಲಾಗಿದ್ದು, ಇವರ ಜಾಗಕ್ಕೆ ಚಿಕ್ಕರಾಜಶೆಟ್ಟಿ ಎಂಬವರು ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಬಿ.ಪುಟ್ಟಸ್ವಾಮಿ ಅಭಿಮಾನಿಗಳು ನೆಚ್ಚಿನ ಅಧಿಕಾರಿ ವರ್ಗಾವಣೆಯಾಗಿರುವುದಕ್ಕೆ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಅವರೇ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರುತ್ತಿದ್ದಾರೆ.

ಕೊಳ್ಳೇಗಾಲ ಮುಂಬರುವ ಚುನಾವಣೆಯಲ್ಲಿ ಬಿ.ಪುಟ್ಟಸ್ವಾಮಿ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿದ್ದು, ಈ ಸಂಬಂಧ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 30 ಸಾವಿರದಷ್ಟು ಮಂದಿ ನೇರ ಸಂಪರ್ಕ ಇಟ್ಟುಕೊಂಡು ಬಿ.ಪುಟ್ಟಸ್ವಾಮಿ ಅಭಿಮಾನಿಗಳ ಸೇವಾ ಟ್ರಸ್ಟ್​​ನಡಿ ಅವರ ಆಪ್ತರು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ವಿಧಾನಸಭಾ ಕ್ಷೇತ್ರದ ವಿವಿಧ ಸಮುದಾಯ ಮುಖಂಡರನ್ನು ಪೊಲೀಸ್ ಅಧಿಕಾರಿ ಪುಟ್ಟಸ್ವಾಮಿ ಆಪ್ತರು ಸಂಪರ್ಕಿಸಿ ಮತಗಳನ್ನು ಗಟ್ಟಿ ಮಾಡಿಕೊಳ್ಳುವ ಹೊತ್ತಿನಲ್ಲಿ ವರ್ಗ ಆಗಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಸದ್ಯ, ಸಾಮಾಜಿಕ ಜಾಲತಾಣಗಳಲ್ಲಿ ವರ್ಗಾವಣೆ ವಿರುದ್ಧ ಹೋರಾಟ ಮಾಡುವುದು, ಸಂಘಟನೆ ಕಾರ್ಯ ಮತ್ತಷ್ಟು ಚುರುಕುಗೊಳಿಸುವುದು ಸೇರಿದಂತೆ ತರಹೇವಾರಿ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:ಹೊಸಕೋಟೆಯಲ್ಲಿ ಅಪಾರ್ಟ್‌ಮೆಂಟ್ ಗೋಡೆ ಕುಸಿದು ನಾಲ್ವರು ಕಾರ್ಮಿಕರು ದುರ್ಮರಣ

Last Updated : Jul 21, 2022, 6:50 PM IST

For All Latest Updates

TAGGED:

ABOUT THE AUTHOR

...view details