ಕರ್ನಾಟಕ

karnataka

ETV Bharat / state

ಹನೂರಲ್ಲಿ ಪೆಟ್ರೋಲ್​​​ ಟ್ಯಾಂಕರ್​​​​ ಪಲ್ಟಿ: ಇಂಧನ ಸೋರಿಕೆ ತಂದಿಟ್ಟ ಆತಂಕ - undefined

ಒಡೆಯರಪಾಳ್ಯದ ಪೆಟ್ರೋಲ್ ಬಂಕ್​​ವೊಂದಕ್ಕೆ ಇಂಧನ ತುಂಬಿಸಲು ಬೆಂಗಳೂರಿನಿಂದ ಬರುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದ್ದು, ಇಂಧನ ಸೋರುತ್ತಿದ್ದರಿಂದ ಬ್ಲಾಸ್ಟ್ ಆಗುವ ಆತಂಕ ಎದುರಾಗಿತ್ತು.

ಪೆಟ್ರೋಲ್ ಟ್ಯಾಂಕರ್ ಪಲ್ಟಿ: ಇಂಧನ ಸೋರಿಕೆ ತಂದಿಟ್ಟ ಆತಂಕ

By

Published : Jul 14, 2019, 11:44 AM IST

Updated : Jul 14, 2019, 1:17 PM IST

ಚಾಮರಾಜನಗರ:ಪೆಟ್ರೋಲ್ ಟ್ಯಾಂಕರ್​ವೊಂದು ಪಲ್ಟಿಯಾಗಿ ಆತಂಕ ಸೃಷ್ಟಿಸಿದ ಘಟನೆ ಹನೂರು ತಾಲೂಕಿನ‌ ಬೋರೆದೊಡ್ಡಿಯಲ್ಲಿ ನಡೆದಿದೆ.

ಪೆಟ್ರೋಲ್ ಟ್ಯಾಂಕರ್ ಪಲ್ಟಿ

ಒಡೆಯರಪಾಳ್ಯದ ಪೆಟ್ರೋಲ್ ಬಂಕ್​​ವೊಂದಕ್ಕೆ ಇಂಧನ ತುಂಬಿಸಲು ಬೆಂಗಳೂರಿನಿಂದ ಬರುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಚಾಲಕ ಮತ್ತು ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.

ಪಲ್ಟಿಯಾದ ಟ್ಯಾಂಕರ್​​ನಿಂದ ಇಂಧನ ಸೋರುತ್ತಿದ್ದರಿಂದ ಬ್ಲಾಸ್ಟ್ ಆಗುವ ಆತಂಕ ಇತ್ತು. ಮಾಹಿತಿ ಅರಿತು ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಪೆಟ್ರೋಲ್​​ ಸೋರಿಕೆಯನ್ನು ನಿಲ್ಲಿಸಿದ್ದಾರೆ.

ಇನ್ನು, ತಿರುವಿನಲ್ಲಿ ಯಾವುದೇ ತಡೆಗೋಡೆಗಳು ಇಲ್ಲದಿರುವುದರಿಂದ ಪದೇ ಪದೆ ವಾಹನಗಳು ಪಲ್ಟಿಯಾಗುವುದು, ಹಳ್ಳಕ್ಕೆ ಜಾರುವುದಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತಡೆಗೋಡೆ ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Last Updated : Jul 14, 2019, 1:17 PM IST

For All Latest Updates

TAGGED:

ABOUT THE AUTHOR

...view details