ಚಾಮರಾಜನಗರ:16 ವರ್ಷದ ಬಾಲಕಿಯೊಬ್ಬಳನ್ನು ಬಣ್ಣದ ಮಾತುಗಳಿಂದ ಪುಸಲಾಯಿಸಿ ಕರೆದೊಯ್ದು ತಾಳಿ ಕಟ್ಟಿ 3 ದಿನ ಸಂಸಾರ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಬೆಳಚವಾಡಿ ಗ್ರಾಮದ ಮಹೇಂದ್ರ (21) ಎಂಬಾತ ಬಂಧಿತ ಆರೋಪಿ. ನಾಲ್ಕು ದಿನಗಳ ಹಿಂದೆ ಮಹೇಂದ್ರ 16 ವರ್ಷದ ಬಾಲಕಿಯೊಬ್ಬಳನ್ನು ಪುಸಲಾಯಿಸಿ ತಮಿಳುನಾಡಿಗೆ ಕರೆದೊಯ್ದು ಅಲ್ಲೇ ಒಂದು ಮನೆ ಮಾಡಿ, ಮನೆಯಲ್ಲೇ ತಾಳಿ ಕಟ್ಟಿದ್ದಾನೆ. ಮೂರು ದಿನಗಳ ಕಾಲ ಬಾಲಕಿಯನ್ನು ಲೈಂಗಿಕವಾಗಿಯೂ ಬಳಸಿಕೊಂಡಿದ್ದಾನೆ ಎನ್ನಲಾಗಿದೆ.