ಕರ್ನಾಟಕ

karnataka

ETV Bharat / state

ಶಾಲೆ ಪಕ್ಕ ಮದ್ಯದಂಗಡಿ ತೆರೆಯಲು ಅನುಮತಿ: ಅಬಕಾರಿ ಡಿಸಿ ವಿರುದ್ಧ ಪ್ರತಿಭಟನೆ - ಅಧಿಕಾರಿಗಳಿಗೆ ಮದ್ಯದಂಗಡಿ ತೆರೆಯದಂತೆ ಮನದಟ್ಟು

ಶಾಲೆ ಸಮೀಪವೇ ಮದ್ಯದಂಗಡಿ ತೆರೆಯಲು ಅನುಮತಿ ನೀಡಿದ್ದು, ಗ್ರಾಮಸ್ಥರು ಅಬಕಾರಿ ಡಿಸಿ ವಿರುದ್ಧ ಜಿಲ್ಲಾಡಳಿತ ಭವನ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಅಬಕಾರಿ ಡಿಸಿ ವಿರುದ್ಧ ಪ್ರತಿಭಟನೆ

By

Published : Oct 4, 2019, 5:59 PM IST

ಚಾಮರಾಜನಗರ:ಶಾಲೆ ಸಮೀಪ ಮದ್ಯದಂಗಡಿ ತೆರೆಯಲು ಅನುಮತಿ ನೀಡಿದ್ದು, ಇದರಿಂದ ರೊಚ್ಚಿಗೆದ್ದ ಚುಂಗಡಿ ಗ್ರಾಮಸ್ಥರು ಅಬಕಾರಿ ಡಿಸಿ ವಿರುದ್ಧ ಜಿಲ್ಲಾಡಳಿತ ಭವನ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಅಬಕಾರಿ ಡಿಸಿ ಮಾದೇಶ್ ಶಾಲೆ ಪಕ್ಕ ಮದ್ಯದಂಗಡಿ ತೆರೆಯಲು ಅನುಮತಿ ನೀಡಿದ್ದಾರೆ. ಚುಂಗಡಿ ಗ್ರಾಮದ ಮುಖ್ಯರಸ್ತೆಯಲ್ಲೇ ಎಂಎಸ್ಐಎಲ್ ಮದ್ಯದಂಗಡಿ ತೆರೆಯಬಾರದು. ಪಕ್ಕದಲ್ಲೇ ಶಾಲೆಯಿದೆ,ಕಾಲೇಜು ವಿದ್ಯಾರ್ಥಿಗಳು ತಿರುಗಾಡುವುದರಿಂದ ಈ ಹಿಂದಿನ ಅಬಕಾರಿ ಅಧಿಕಾರಿಗಳಿಗೆ ಮದ್ಯದಂಗಡಿ ತೆರೆಯದಂತೆ ಮನದಟ್ಟು ಮಾಡಲಾಗಿತ್ತು. ಆದರೆ, ಏಕಾಏಕಿ ಹೊಸ ಡಿಸಿ ಅನುಮತಿ ನೀಡಿರುವುದು ಸರಿಯಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಬಕಾರಿ ಡಿಸಿ ವಿರುದ್ಧ ಪ್ರತಿಭಟನೆ

ಮದ್ಯದಂಗಡಿ ತೆರೆಯುವುದರಿಂದ ಅಕ್ಕಪಕ್ಕದ ಗ್ರಾಮಗಳಲ್ಲೂ ಶಾಂತಿ-ಸುವ್ಯವಸ್ಥೆ ಕೆಡಲಿದೆ ಒಂದು ವೇಳೆ ತೆರೆದಿದ್ದೇ ಆದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ABOUT THE AUTHOR

...view details