ಚಾಮರಾಜನಗರ: ಲಾಕ್ಡೌನ್ ಆದರೂ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುತ್ತಿದ್ದ 20ಕ್ಕೂ ಹೆಚ್ಚು ಮಂದಿಗೆ ಇಂದು ರಾತ್ರಿ ಮಂಡಿಯೂರಿ ಕೂರುವ ಶಿಕ್ಷೆ ಅನುಭವಿಸಿದರು.
ಸುತ್ತಾಡಲು ಬಂದವರಿಗೆ ಮಂಡಿಯೂರಿ ಕೂರುವ ಶಿಕ್ಷೆ - ಎಸ್ಪಿ ಹೆಚ್.ಡಿ.ಆನಂದಕುಮಾರ್
ಸಚಿವ ಸುರೇಶ್ ಕುಮಾರ್ ಇಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದ ವೇಳೆ ಅನಗತ್ಯವಾಗಿ ಓಡಾಡುವವರನ್ನು ಮುಲಾಜಿಲ್ಲದೇ ಜೈಲಿಗಟ್ಟಿ ಎಂದು ಸೂಚಿಸಿದ್ದಾರೆ.
ಸುತ್ತಾಡಲು ಬಂದವರನ್ನು ಮಂಡಿಯೂರಿ ಕೂರಿಸಿದ ಚಾಮರಾಜನಗರ ಡಿಸಿ-ಎಸ್ಪಿ
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಎಸ್ಪಿ ಹೆಚ್.ಡಿ.ಆನಂದಕುಮಾರ್ ಅವರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಭುವನೇಶ್ವರಿ ವೃತ್ತದಲ್ಲಿ ಅನಗತ್ಯವಾಗಿ 20ಕ್ಕೂ ಹೆಚ್ಚು ಬೈಕ್ ಸವಾರರು ಓಡಾಡುತ್ತಿದ್ದರು
ಮತ್ತೆ ಮನೆಯಿಂದ ಹೊರಬಂದರೆ ಕಂಬಿ ಎಣಿಸಬೇಕಾಗುತ್ತದೆ. ಕೊರೊನಾ ವೈರಸ್ ವಿರುದ್ಧ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಸರ್ಕಾರದ ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ಖಡಕ್ ವಾರ್ನಿಂಗ್ ನೀಡಿದರು. ಇನ್ನು ಮುಂದೆ ಅನಗತ್ಯವಾಗಿ ಓಡಾಡುವುದಿಲ್ಲ ಎಂದು ಬೈಕ್ ಸವಾರರಿಂದ ಪ್ರಮಾಣ ಮಾಡಿಸಿಕೊಂಡು ಮನೆಗೆ ಕಳುಹಿಸಿದರು.