ಕರ್ನಾಟಕ

karnataka

ETV Bharat / state

ಚಾಮರಾಜನಗರ: ವೀಕೆಂಡ್ ಕರ್ಫ್ಯೂ... ಮದ್ಯದಂಗಡಿಗೆ ಮುಗಿಬಿದ್ದ ಎಣ್ಣೆಪ್ರಿಯರು

ರಾತ್ರಿ 10 ಗಂಟೆಯ ಬಳಿಕ ನಗರದಲ್ಲಿ ಕರ್ಫ್ಯೂ ಜಾರಿಯಾಗುವ ಕಾರಣ ಮದ್ಯದಂಗಡಿಗಳ ಮುಂದೆ ಸಂಜೆ 7.30 ರಿಂದಲೇ ಸಾಲುಗಟ್ಟಿ ನಿಂತ ಜನರು ತಮಗೆ ಬೇಕಾದಷ್ಟು ಮದ್ಯ ಖರೀದಿಸಿ ತೆರಳಿದರು.

chamarajnagara
ಗುಂಡುಪ್ರಿಯರು

By

Published : Jan 7, 2022, 9:19 PM IST

ಚಾಮರಾಜನಗರ:ಕೊರೊನಾ ತಡೆಗೆ ಸರ್ಕಾರ ವಾರಾಂತ್ಯ ಕರ್ಫ್ಯೂ ಘೋಷಿಸಿರುವುದರಿಂದ ಮದ್ಯಪ್ರಿಯರು ಎಣ್ಣೆ ಅಂಗಡಿ ಮುಂದೆ ಸಾಲುಗಟ್ಟಿ ನಿಂತು ಚೀಲಗಳಲ್ಲಿ ಮದ್ಯದ ಬಾಟಲಿಗಳನ್ನು ಕೊಂಡೊಯ್ದರು.

ರಾತ್ರಿ 10 ಗಂಟೆಯ ಬಳಿಕ ನಗರದಲ್ಲಿ ಕರ್ಫ್ಯೂ ಜಾರಿಯಾಗುವ ಕಾರಣ ಮದ್ಯದಂಗಡಿಗಳ ಮುಂದೆ ಸಂಜೆ 7.30 ರಿಂದಲೇ ಸಾಲುಗಟ್ಟಿ ನಿಂತ ಜನರು ತಮಗೆ ಬೇಕಾದಷ್ಟು ಮದ್ಯ ಖರೀದಿಸಿ ತೆರಳಿದರು.

ಮದ್ಯದಂಗಡಿಗೆ ಮುಗಿಬಿದ್ದ ಗುಂಡುಪ್ರಿಯರು

ಪ್ರತಿದಿನ ಮದ್ಯ ಸೇವಿಸುವ ಅಭ್ಯಾಸವಿದೆ. ಶನಿವಾರ, ಭಾನುವಾರ ಮದ್ಯದಂಗಡಿ ಬಂದ್​ ಇರುವ ಕಾರಣ ಇಂದೇ ಮದ್ಯ ಖರೀದಿ ಮಾಡುತ್ತಿದ್ದೇವೆ. ಕಾಳಸಂತೆಯಲ್ಲಿ ಹೆಚ್ಚಿನ ಹಣ ನೀಡಿ ಮದ್ಯ ಖರೀದಿಸಲು ಸಾಧ್ಯವಿಲ್ಲ ಎಂದು ಮದ್ಯಪ್ರಿಯರೊಬ್ಬರು ಹೇಳಿದರು.

ಈ ಹಿಂದೆ ಲಾಕ್​ಡೌನ್​​ನಲ್ಲಿ ಎಣ್ಣೆ ಸಿಗದೇ ಒದ್ದಾಡಿದ ಪರಿಸ್ಥಿತಿ ಅನುಭವಿಸಿದ್ದರಿಂದ ಎಚ್ಚೆತ್ತ ಜನರು ಇಂದು ಮುಗಿಬಿದ್ದು ಖರೀದಿ ಮಾಡಿದ್ದರಿಂದ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ವ್ಯಾಪಾರವಾಗಿದೆ ಎಂದು ಮದ್ಯದಂಗಡಿ ಮಾಲೀಕರೊಬ್ಬರು ತಿಳಿಸಿದರು.

ಇದನ್ನೂ ಓದಿ:ಸರ್ಕಾರಿ ಕಚೇರಿಗಳ ಪ್ರವೇಶಕ್ಕೆ ಎರಡು ಡೋಸ್ ಲಸಿಕೆ ಕಡ್ಡಾಯಗೊಳಿಸಲು ತೀರ್ಮಾನ

ABOUT THE AUTHOR

...view details