ಚಾಮರಾಜನಗರ: ರಾಮಸಮುದ್ರ ಠಾಣೆಯ ಪಿಎಸ್ಐ ಪುಟ್ಟಸ್ವಾಮಿ ಅವರ ದಿಢೀರ್ ವರ್ಗಾವಣೆ ಖಂಡಿಸಿ ನಗರದಲ್ಲಿ ನೂರಾರು ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಪಿಎಸ್ಐ ಪುಟ್ಟಸ್ವಾಮಿ ದಿಢೀರ್ ವರ್ಗಾವಣೆ ಖಂಡಿಸಿ ಪ್ರತಿಭಟನೆ - People outrage for PSI transfer
ಪಿಎಸ್ಐ ಪುಟ್ಟಸ್ವಾಮಿ ಅವರನ್ನು ರಾಮಸಮುದ್ರ ಠಾಣೆಯಿಂದ ಸಿಇಎನ್ ಠಾಣೆಗೆ ಸರ್ಕಾರ ವರ್ಗಾವಣೆ ಮಾಡಿದ್ದನ್ನು ಖಂಡಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.
ಪಿಎಸ್ಐ ವರ್ಗಾವಣೆ ಖಂಡಿಸಿ ಪ್ರತಿಭಟನೆ
ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಶುಕ್ರವಾರ ರಾತ್ರಿ ಪಿಎಸ್ಐ ಪುಟ್ಟಸ್ವಾಮಿ ಅವರನ್ನು ರಾಮಸಮುದ್ರ ಠಾಣೆಯಿಂದ ಸಿಇಎನ್ ಠಾಣೆಗೆ ವರ್ಗಾವಣೆ ಮಾಡಿರುವುದು ಖಂಡನೀಯ. ಏಕಾಏಕಿ ಅವರೊಬ್ಬರನ್ನು ಸರ್ಕಾರ ವರ್ಗಾವಣೆ ಮಾಡಿ ದಕ್ಷ ಅಧಿಕಾರಿಗೆ ತೊಂದರೆ ನೀಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.