ETV Bharat Karnataka

ಕರ್ನಾಟಕ

karnataka

ETV Bharat / state

ಸ್ಥಗಿತವಾಗದ ಗಣಿಗಾರಿಕೆ: ಸಚಿವ ಸೋಮಣ್ಣ ಸೂಚನೆ ಮಾಧ್ಯಮಗೋಷ್ಠಿಗಷ್ಟೇ ಸೀಮಿತವೇ? - ತಿಂಗಳುಗಳ ಕಾಲ ಗಣಿಗಾರಿಕೆ ಸ್ಥಗಿತಗೊಳಿಸಿ ಎಂದು ಸೂಚಿಸಿದ್ದ ಸೋಮಣ್ಣ

ಚಾಮರಾಜನಗರದ ಮಹಮ್ಮದ್ ಅಲಿ ಎಂಬವರು ವಿಡಿಯೋ ಮಾಡಿ ಈಟಿವಿ ಭಾರತಕ್ಕೆ ಕೊಟ್ಟಿದ್ದು, ಚಾಮರಾಜನಗರ ತಾಲೂಕಿನ ಮಸಗಾಪುರ ಗ್ರಾಮದಲ್ಲಿ ಮೈಸೂರು ಮಿನರಲ್ಸ್ ಲಿಮಿಟೆಡ್ ಗುತ್ತಿಗೆ ಪಡೆದಿರುವ ಅಕ್ಕಪಕ್ಕದಲ್ಲೇ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಚಾಮರಾಜನಗರದಲ್ಲಿ ಸ್ಥಗಿತಗೊಳ್ಳದ ಗಣಿಗಾರಿಕೆ
ಚಾಮರಾಜನಗರದಲ್ಲಿ ಸ್ಥಗಿತಗೊಳ್ಳದ ಗಣಿಗಾರಿಕೆ
author img

By

Published : Mar 7, 2022, 4:44 PM IST

Updated : Mar 7, 2022, 4:54 PM IST

ಚಾಮರಾಜನಗರ: ಒಂದು ತಿಂಗಳ ಕಾಲ ಚಾಮರಾಜನಗರದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಿ‌ ಡಿಸಿ, ಭೂ ವಿಜ್ಞಾನಿಗಳ‌ ತಂಡ ತಪಾಸಣೆ ಮಾಡಿದ ಬಳಿಕವಷ್ಟೇ ಕ್ವಾರಿ ನಡೆಸಲು ಅವಕಾಶ ಎಂದು ಗುಡುಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಎಚ್ಚರಿಕೆ ಮಾಧ್ಯಮಗೋಷ್ಠಿಗಷ್ಟೇ ಸೀಮಿತವಾಯಿತೇ ಎಂಬ ಪ್ರಶ್ನೆ ಉದ್ಭವಿಸಿದೆ.‌

ಚಾಮರಾಜನಗರದ ಮಹಮ್ಮದ್ ಅಲಿ ಎಂಬವರು ವಿಡಿಯೋವೊಂದನ್ನು ಮಾಡಿ ಈಟಿವಿ ಭಾರತಕ್ಕೆ ನೀಡಿದ್ದು, ಚಾಮರಾಜನಗರ ತಾಲೂಕಿನ ಮಸಗಾಪುರ ಗ್ರಾಮದಲ್ಲಿ ಮೈಸೂರು ಮಿನರಲ್ಸ್ ಲಿಮಿಟೆಡ್ ಗುತ್ತಿಗೆ ಪಡೆದಿರುವ ಅಕ್ಕಪಕ್ಕದಲ್ಲೇ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ತಪಾಸಣೆ ನಡೆಸಿದ ಬಳಿಕವಷ್ಟೇ ಗಣಿಗಾರಿಕೆ ನಡೆಸಬೇಕೆಂದು ಸೋಮಣ್ಣ ಸೂಚನೆಗೂ ಬಗ್ಗದ ಕೆಲ ಉದ್ಯಮಿಗಳು ರಾಜಾರೋಷವಾಗಿಯೇ ಗಣಿಗಾರಿಕೆ ನಡೆಸುತ್ತಿರುವುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಕಾರ್ಯದಕ್ಷತೆಗೆ ಕನ್ನಡಿ ಹಿಡಿದಿದೆ.

ಸ್ಥಗಿತವಾಗದ ಗಣಿಗಾರಿಕೆ, ಸಾರ್ವಜನಿಕರ ಆಕ್ರೋಶ

ಇದನ್ನೂ ಓದಿ: ರಷ್ಯಾ - ಉಕ್ರೇನ್‌ ಯುದ್ಧದಿಂದ ಚಿನ್ನ ಪ್ರಿಯರಿಗೆ ಬಿಗ್‌ ಶಾಕ್‌; ಬಂಗಾರದ ಮೇಲೆ 2,500 ರೂಪಾಯಿ ಏರಿಕೆ

ಸಾಕಷ್ಟು ಬಾರಿ ಡಿಸಿ ಮತ್ತು ಮೈನಿಂಗ್ ಡಿಡಿಗೆ ದೂರು ಕೊಟ್ಟರು ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಅಕ್ರಮವಾಗಿ ನಡೆಯುತ್ತಿದೆ ಎಂದರೂ ಏನೂ ಕ್ರಮವಾಗಿಲ್ಲ, ಸಚಿವರು ಎಲ್ಲವನ್ನೂ ಸ್ಥಗಿತಗೊಳಿಸಿ ತಪಾಸಣೆ ಮಾಡುತ್ತೇವೆ ಎಂದರೂ ಯಾವುದೂ ಸ್ಥಗಿತಗೊಂಡಿಲ್ಲ ಎಂದು ಮಹಮ್ಮದ್ ಅಲಿ ದೂರಿದ್ದಾರೆ.

ಅಕ್ರಮ ಕ್ವಾರಿಗಳ ವಿರುದ್ಧ ರಸ್ತೆ ತಡೆ: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಮಟ್ಟ ಹಾಕಬೇಕೆಂದು ಆಗ್ರಹಿಸಿ, ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ನಗರದಲ್ಲಿ ಹಾದು ಹೋಗುವ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯನ್ನು ತಡೆದ ರೈತ ಸಂಘದ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.

ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಕೆಲವೆಡೆ ಅರಣ್ಯ ಇಲಾಖೆ ಎನ್ಒಸಿ ನೀಡದಿದ್ದರೂ ಗಣಿಗಾರಿಕೆ ನಡೆಯುತ್ತಿದೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ,‌ ಜಿಲ್ಲೆಯ ಸಂಪತ್ತನ್ನು ಗಣಿ‌ ಉದ್ಯಮಿಗಳು ಹಿಂಡಿ‌ವ ಹಿಪ್ಪೆ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

Last Updated : Mar 7, 2022, 4:54 PM IST

For All Latest Updates

TAGGED:

ABOUT THE AUTHOR

...view details