ಕರ್ನಾಟಕ

karnataka

ETV Bharat / state

ಚಾಮರಾಜನಗರ: ಅನ್​ಲಾಕ್ ಬೆನ್ನಲ್ಲೇ ಪ್ರವಾಸಿ ತಾಣಗಳಲ್ಲಿ ಜನವೋ ಜನ - people not follow the Social distance in tourist places at chamarajanagar

ಲಾಕ್​ಡೌನ್​ ಹಿನ್ನೆಲೆ ಕಳೆದ ಎರಡು ತಿಂಗಳಿಂದ ಬಂದ್ ಆಗಿದ್ದ ಜೆಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳು ಇಂದಿನಿಂದ ತೆರೆದಿದ್ದು ಜನಜಂಗುಳಿಯಿಂದ ಕೂಡಿತ್ತು.

chamarajanagar
ಸಹಜ ಸ್ಥಿತಿಯತ್ತ ಮರಳಿದ ಚಾಮರಾಜನಗರ

By

Published : Jul 5, 2021, 8:23 PM IST

ಚಾಮರಾಜನಗರ: ಇಂದಿನಿಂದ ಮೂರನೇ ಹಂತದ ಅನ್​ಲಾಕ್​ ಜಾರಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಸಹಜ ಜೀವನದತ್ತ ಮರಳಿದ್ದು ಬೆಳಗ್ಗೆಯಿಂದ ಸಂಜೆವರೆಗೂ ಆರ್ಥಿಕ ಚಟುವಟಿಕೆಗಳು ಗರಿಗೆದರಿದ್ದವು.

ಸಹಜ ಸ್ಥಿತಿಯತ್ತ ಮರಳಿದ ಚಾಮರಾಜನಗರ

ಕಳೆದ ಎರಡು ತಿಂಗಳಿಂದ ಬಂದ್ ಆಗಿದ್ದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ, ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಯಳಂದೂರು ತಾಲೂಕಿನ‌ ಬಿಳಿಗಿರಿರಂಗನ ಬೆಟ್ಟಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು. ಬಂಡೀಪುರ ಸಫಾರಿ ಕೇಂದ್ರ ಹಾಗೂ ಭರಚುಕ್ಕಿ ಜಲಪಾತ‌‌‌ ವೀಕ್ಷಣೆಗೂ ತಕ್ಕಮಟ್ಟಿಗೆ ಪ್ರವಾಸಿಗರು‌ ಆಗಮಿಸಿದ್ದರು.

ಲಾಕ್​ಡೌನ್​ ವೇಳೆಯಲ್ಲಿ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದ ಜಿಲ್ಲೆಯ‌ ಹೋಟೆಲ್ ಉದ್ಯಮ ಇಂದು ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದು, ಎಲ್ಲಾ ಹೋಟೆಲ್​ಗಳಲ್ಲಿ ಜನರು ಕಿಕ್ಕಿರಿದಿದ್ದರು. ಜೊತೆಗೆ ಸಾರಿಗೆ ಸಂಚಾರ ಸಹ ಸಾಮಾನ್ಯವಾಗಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು.

ABOUT THE AUTHOR

...view details