ಕರ್ನಾಟಕ

karnataka

ETV Bharat / state

ಲೋಕಕ್ಕೆಲ್ಲಾ ಇಂದು ಯುಗಾದಿ.. ಆದರೆ, ಗುಂಡ್ಲುಪೇಟೆಯ 9 ಊರುಗಳಲ್ಲಿ ಬೇರೆ ದಿನ.. ಕಾರಣ ವಿಚಿತ್ರ! - gundlupete ugadi celebration special

ಮುಂಗಾರು ಆರಂಭವಾಗುವ ಕಾಲದ ವರ್ಷದ ಹೊಸ ಪಂಚಾಂಗದ ಹೊಸ ಹಬ್ಬವಾಗಿರುವ ಯುಗಾದಿ ಹಬ್ಬ ಮಾತ್ರ ಈ 9 ಗ್ರಾಮಗಳಿಗೆ ಅನ್ವಯಿಸುದಿಲ್ಲ. ಅಲ್ಲದೆ, ಗ್ರಾಮಗಳ ರೈತರು ಸೇರಿದಂತೆ ಸಾರ್ವಜನಿಕರು ಯುಗಾದಿ ಹಬ್ಬದ ಸಮಯದಲ್ಲಿ ಮಳೆ ಬಿದ್ದರೂ ಹೊನ್ನೇರು ಕಟ್ಟುವುದಿಲ್ಲ..

people-not-celebrating-ugadi-in-these-9-villages-today
ಗುಂಡ್ಲುಪೇಟೆಯ 9 ಊರುಗಳಲ್ಲಿ ಬೇರೆ ದಿನ ಯುಗಾದಿ ಆಚರಣೆ

By

Published : Apr 2, 2022, 7:24 PM IST

ಚಾಮರಾಜನಗರ :ಯುಗಾದಿ ಬಂತೆಂದರೆ ಎಲ್ಲೆಡೆ ಸಡಗರ, ಸಂಭ್ರಮ. ಚಿಣ್ಣರಿಗೆ ಹೊಸ ದಿರಿಸಿನ ಖುಷಿ, ಹಿರಿಯರಿಗೆ ಊಟ, ಕುಟುಂಬದವರೊಟ್ಟಿಗೆ ಬೆರೆಯುವ ಸಂತಸ. ಆದರೆ, ದೇಶಾದ್ಯಂತ ಇಂದು ಯುಗಾದಿ ಆಚರಿಸುತ್ತಿದ್ದರೆ, ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ‌ 9 ಗ್ರಾಮಗಳು ಬೇರೆ ದಿನ ಹಬ್ಬವನ್ನು ಆಚರಿಸುತ್ತಿವೆ.

ತಾಲೂಕಿನ 9 ಗ್ರಾಮಗಳಲ್ಲಿ ಹಬ್ಬದ ಸಂತಸವೇ ಇಲ್ಲ, ಕಾರಣ ಈ ಬಾರಿ ಹಬ್ಬ ಶನಿವಾರ ಬಂದಿರುವುದು. ಗುಂಡ್ಲುಪೇಟೆ ತಾಲೂಕಿನ ವೀರನಪುರ, ಬನ್ನಿತಾಳಪುರ, ಇಂಗಲವಾಡಿ, ಮಾಡ್ರಹಳ್ಳಿ, ಮಳವಳ್ಳಿ ಹಾಗೂ ನೇನೆಕಟ್ಟೆ ಗ್ರಾಮಗಳಲ್ಲಿ ಯುಗಾದಿಯು ಬುಧವಾರ ಬಂದರೆ ಮಾತ್ರ ಹಬ್ಬ ಆಚರಿಸಲಾಗುತ್ತದೆ. ಇಲ್ಲದಿದ್ದರೆ ಮುಂದಿನ ಬುಧವಾರವೇ ಬೇವು-ಬೆಲ್ಲ ಸವಿದು ಹಬ್ಬವನ್ನು ಸಂಭ್ರಮಿಸುತ್ತಾರೆ.

ಮುಂಗಾರು ಆರಂಭವಾಗುವ ಕಾಲದ ವರ್ಷದ ಹೊಸ ಪಂಚಾಂಗದ ಹೊಸ ಹಬ್ಬವಾಗಿರುವ ಯುಗಾದಿ ಹಬ್ಬ ಮಾತ್ರ ಮೇಲ್ಕಂಡ ಗ್ರಾಮಗಳಿಗೆ ಅನ್ವಯಿಸುವ ಮಾತೇ ಇಲ್ಲ. ಅಲ್ಲದೆ, ಈ ಗ್ರಾಮಗಳ ರೈತರು ಸೇರಿದಂತೆ ಸಾರ್ವಜನಿಕರು ಯುಗಾದಿ ಹಬ್ಬದ ಸಮಯದಲ್ಲಿ ಮಳೆ ಬಿದ್ದರೂ ಹೊನ್ನೇರು ಕಟ್ಟುವುದಿಲ್ಲ. ಗುಂಡ್ಲುಪೇಟೆ ತಾಲೂಕಿನ ರಂಗೂಪುರ ಗ್ರಾಮದಲ್ಲಿ ಗುರುವಾರ ದಿನದಂದು ಯುಗಾದಿ ಹಬ್ಬ ಬಂದರೆ ಮಾತ್ರ ಗ್ರಾಮದಲ್ಲಿ ಹಬ್ಬದ ಸಂಭ್ರಮ, ಸಡಗರ. ರಂಗೂಪುರ ಗ್ರಾಮದಲ್ಲಿ ಏ.2 ಶನಿವಾರ ಬದಲಾಗಿ ಏ.7ರ ಗುರುವಾರ ಹಬ್ಬ ಆಚರಣೆ ಮಾಡಲಿದ್ದಾರೆ.

ಇದು ರಂಗೂಪುರ ಗ್ರಾಮದ ಕಥೆಯಾದರೆ, ನೇನೆಕಟ್ಟೆ, ಮಾಡ್ರಹಳ್ಳಿ, ಬೆಂಡಗಳ್ಳಿ, ಬನ್ನಿತಾಳಪುರ, ಮಳವಳ್ಳಿ, ವೀರನಪುರ, ಇಂಗಲವಾಡಿ ಗ್ರಾಮದಲ್ಲಿ ಮುಂದಿನ ಬುಧವಾರ(ಏ.6) ಬರುವ ತನಕ ಹಬ್ಬ ಆಚರಣೆ ಇಲ್ಲ. ಬೆಳಚಲವಾಡಿ ಗ್ರಾಮದಲ್ಲಿ ಗುರುವಾರ ವಾಡಿಕೆಯಂತೆ ಯುಗಾದಿ ಹಬ್ಬ ಬಂದರೆ ಹಬ್ಬ ಮಾಡುವುದಿಲ್ಲ. ಉಳಿದೆಲ್ಲ ದಿನಗಳಲ್ಲಿ ಅಂದರೆ ಗುರುವಾರ ಹೊರತುಪಡಿಸಿ ಬಂದರೆ ಮಾತ್ರ ಹಬ್ಬ ಆಚರಿಸಲಾಗುತ್ತದೆ.

ಒಂದು ವೇಳೆ ಹಬ್ಬ ಆಚರಿಸಿದರೆ ಗ್ರಾಮಕ್ಕೆ ಅನಾಹುತ ಸಂಭವಿಸಲಿದೆ ಎಂಬ ನಂಬಿಕೆ, ಭೀತಿ ಬಲವಾಗಿ ಬೇರೂರಿವುದರಿಂದ ಈ ಗ್ರಾಮಗಳಲ್ಲಿ ಹಬ್ಬ ಆಚರಿಸದ ಸಂಪ್ರದಾಯ ಹತ್ತಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.

ಇದನ್ನೂ ಓದಿ:ಪೊಲೀಸ್ ಕಲ್ಯಾಣ ನಿಧಿಗೆ 5 ಕೋಟಿ ರೂಪಾಯಿ : ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

ABOUT THE AUTHOR

...view details