ಚಾಮರಾಜನಗರ:ಮಕ್ಕಳು, ಯುವಕ-ಯುವತಿಯರು, ಹಿರಿಯರಾದಿಯಾಗಿ ಜಗಮಗಿಸುವ ದೀಪದಡಿ ಮಾಸ್ಕ್, ಶಾರೀರಿಕ ಅಂತರವಿಲ್ಲದೇ ಸೆಲ್ಫಿ ಸುರಿಮಳೆ ಸುರಿಸಿ ಸಂಭ್ರಮಿಸಿದರು.
ಜಿಲ್ಲಾ ದಸರಾ ಪ್ರಯುಕ್ತ ಚಾಮರಾಜೇಶ್ವರ ದೇಗುಲ ಸೇರಿದಂತೆ ಆವರಣಕ್ಕೆಲ್ಲಾ ಹಾಕಿರುವ ಬಣ್ಣ-ಬಣ್ಣದ ದೀಪಗಳಿಗೆ ಆಕರ್ಷಿತರಾದ ಜನರು ಹಬ್ಬದ ಸಂಭ್ರಮಕ್ಕೆ ಮಾಸ್ಕ್ ಧರಿಸದೇ ಕೊರೊನಾ ಭಯ ಮರೆತರು.
ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಕುರಿತು ಆರೋಗ್ಯ ಇಲಾಖೆಯಾಗಲಿ, ಪೊಲೀಸ್ ಇಲಾಖೆ ಸೇರಿದಂತೆ ಯಾರೊಬ್ಬರು ಜಾಗೃತಿ ಮೂಡಿಸಲು ಮುಂದಾಗದಿರುವುದರಿಂದ ಜನಜಾತ್ರೆಯೇ ದೇಗುಲ ಆವರಣದಲ್ಲಿ ಸೇರಿತ್ತು.
ಮಕ್ಕಳು, ಹಿರಿಯರು ಕೂಡ ಮಾಸ್ಕ್ ಧರಿಸದೇ ಅಡ್ಡಾಡುತ್ತಿರುವುದು ಸಾಮಾನ್ಯವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಅರಿವು ಮೂಡಿಸಬೇಕಿದೆ. ಇಲ್ಲದಿದ್ದರೇ, ದಸರಾ ಸಂಭ್ರಮದ ಸೆಲ್ಫಿ ಸ್ಪಾಟ್ ಕೊರೊನಾ ಉಲ್ಬಣ ಕೇಂದ್ರವಾಗಲಿದೆ.