ಚಾಮರಾಜನಗರ: ಕೋವಿಡ್-19 ಪರಿಹಾರ ನಿಧಿಗೆ ಪೊಲೀಸ್ ಪೇದೆಯೊಬ್ಬರು ಪಿಂಚಣಿ ಹಣ ಕೊಡಲು ಮುಂದಾಗಿದ್ದಾರೆ.
ಕೊರೊನಾ ಪರಿಹಾರ ನಿಧಿಗೆ ಪಿಂಚಣಿ ಹಣ ದೇಣಿಗೆ: ಚಾಮರಾಜನಗರ ಪೇದೆಯ ನಿರ್ಧಾರಕ್ಕೆ ಮೆಚ್ಚುಗೆ - Pension money for Corona Relief Fund
ವೃತ್ತ ನಿರೀಕ್ಷಕ ಕಚೇರಿಯ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಂಜಪ್ಪ ಪಿಂಚಣಿ ಹಣವನ್ನು ಕೊರೊನಾ ಪರಿಹಾರ ನಿಧಿಗೆ ನೀಡಲು ಮುಂದಾಗಿದ್ದಾರೆ.
![ಕೊರೊನಾ ಪರಿಹಾರ ನಿಧಿಗೆ ಪಿಂಚಣಿ ಹಣ ದೇಣಿಗೆ: ಚಾಮರಾಜನಗರ ಪೇದೆಯ ನಿರ್ಧಾರಕ್ಕೆ ಮೆಚ್ಚುಗೆ Corona Relief Fund](https://etvbharatimages.akamaized.net/etvbharat/prod-images/768-512-6777352-750-6777352-1586779623386.jpg)
ಮೆಚ್ಚುಗೆಗೆ ಪಾತ್ರವಾದ ಚಾಮರಾಜನಗರ ಪೇದೆ
ಕೊಳ್ಳೆಗಾಲದ ವೃತ್ತ ನಿರೀಕ್ಷಕ ಕಚೇರಿಯ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಂಜಪ್ಪ ತಮ್ಮ ಎನ್ಪಿಎಸ್ ಖಾತೆಯಿಂದ 25 ಸಾವಿರ ರೂ. ಹಣವನ್ನು ಕಡಿತಗೊಳಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಲಾಕ್ಡೌನ್ನಿಂದ ಸಂಕಷ್ಟಕ್ಕೀಡಾಗಿರುವ ಬಡವರು, ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಸಹಾಯ ಮಾಡುವ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಪತ್ರದಲ್ಲಿ ಮಂಜಪ್ಪ ತಿಳಿಸಿದ್ದಾರೆ. ಪೊಲೀಸ್ ಪೇದೆಯ ಮಾನವೀಯ ನಡೆಗೆ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.