ಚಾಮರಾಜನಗರ: ಭಾರತ್ ಜೋಡೋ ಯಾತ್ರೆಯಲ್ಲಿ ಪೇಸಿಎಂ ಎಂದು ಟೀ ಶರ್ಟ್ ಮತ್ತು ಧ್ವಜ ಹಿಡಿದು ಓಡಾಡುತ್ತಿದ್ದ ಯುವಕನನ್ನು ಯಾತ್ರೆ ವೇಳೆ ಹಿಡಿದ ಪೊಲೀಸರು ನಡುರಸ್ತೆಯಲ್ಲೇ ಟೀ ಶರ್ಟ್ ಬಿಚ್ಚಿಸಿದ್ದಾರೆ. ಟೀ ಶರ್ಟ್ ಬಿಚ್ಚುತ್ತಿರುವಾಗ ಪೊಲೀಸ್ ಸಿಬ್ಬಂದಿ ಒಬ್ಬರು ಆತನ ತಲೆಗೆ, ಬೆನ್ನಿಗೆ ಹೊಡೆಯುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಟೀ ಶರ್ಟ್ ಧರಿಸಿದ್ದ ಯುವಕ ಅಕ್ಷಯ್ನನ್ನು ಚಾಮರಾಜನಗರ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಭಾರತ್ ಜೋಡೋ ಯಾತ್ರೆ: ರಸ್ತೆಯಲ್ಲಿ ಯುವಕನ ಪೇಸಿಎಂ ಶರ್ಟ್ ಬಿಚ್ಚಿಸಿ, ಹೊಡೆದ ಪೊಲೀಸ್ - ಈಟಿವಿ ಭಾರತ ಕನ್ನಡ
ಭಾರತ್ ಜೋಡೋ ಯಾತ್ರೆಯಲ್ಲಿ ಯುವಕನೊಬ್ಬ ಪೇಸಿಎಂ ಟೀಶರ್ಟ್ ಮತ್ತು ಬಾವುಟ ಹಿಡುದು ಓಡಾಡುತ್ತಿದ್ದ ಕಾರಣ ಪೊಲೀಸರು ಆತನನ್ನು ಬಂಧಿಸಿದ್ದಾರೆ.
Etv ಭಾರತ್ ಜೋಡೋ ಯಾತ್ರೆ
ರಾಹುಲ್ ಯಾತ್ರೆಯಲ್ಲಿ ಈತ ಪೇಸಿಎಂ ಟೀ ಶರ್ಟ್ ಧರಿಸಿ, ಪೇ ಸಿಎಂ ಎಂಬ ಬಾವುಟ ಹಿಡಿದು ಅಕ್ಷಯ್ ಕುಮಾರ್ ಹೆಜ್ಜೆ ಹಾಕುತ್ತಿದ್ದರ ಸಂಬಂಧ ಚಾಮರಾಜನಗರ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಯುವಕನನ್ನು ಕಂಡ ಕೂಡಲೇ ದಾಳಿ ಮಾಡಿದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರ ಎದುರಲ್ಲೇ ಯುವಕನಿಗೆ ಥಳಿಸಿ ಪೇಸಿಎಂ ಬಾವುಟ ಕಿತ್ತುಕೊಂಡು ಟೀ ಶರ್ಟ್ ಬಿಚ್ಚಿಸಿದ್ದಾರೆ.
ಇದನ್ನೂ ಓದಿ :ಭಾರತ್ ಜೋಡೋ ಯಾತ್ರೆಯಲ್ಲಿ ಪೇಸಿಎಂ ಧ್ವಜ ಹಿಡಿದ ವ್ಯಕ್ತಿ ವಿರುದ್ಧ FIR