ಚಾಮರಾಜನಗರ:ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯ ಮುಜರಾಯಿ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪರ್ಜನ್ಯ ಜಪ ನಡೆಸಿ ವರುಣನಿಗಾಗಿ ಪ್ರಾರ್ಥಿಸಲಾಯಿತು.
ಗಡಿ ಜಿಲ್ಲೆಯಲ್ಲಿ ಪರ್ಜನ್ಯ ಜಪ: ಪ್ರಮುಖ ದೇವಾಲಯಗಳಲ್ಲಿ ವರುಣನಿಗೆ ಪೂಜೆ! - Puja, rain,parjnya,
ಚಾಮರಾಜನಗರ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯ ಮುಜರಾಯಿ ದೇಗುಲಗಳಲ್ಲಿ ಪರ್ಜನ್ಯ ಜಪ ನಡೆಸಿ ವರುಣನಿಗಾಗಿ ಪ್ರಾರ್ಥಿಸಲಾಯಿತು.
ಗಡಿ ಜಿಲ್ಲೆಯಲ್ಲಿ ಪರ್ಜನ್ಯ ಜಪ: ಪ್ರಮುಖ ದೇವಾಲಯಗಳಲ್ಲಿ ವರುಣನಿಗೆ ಮೊರೆ!
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಬೆಳಗ್ಗೆ4.30ರಿಂದಲೇ ಮಾದಪ್ಪನಿಗೆ ಜಲಾಭಿಷೇಕ ಮಾಡಿ ಆಗಮಿಕರು ಪರ್ಜನ್ಯ ಜಪ ನಡೆದಿದ್ದು, ಬೆಳಗ್ಗೆ 7ವರೆಗೂ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಲಾಗಿದೆ. ಅಲ್ಲದೇ ಚಾಮರಾಜನಗರದ ಚಾಮರಾಜೇಶ್ವರ ದೇಗುಲದಲ್ಲಿ ವರುಣನ ಕೃಪೆಗಾಗಿ ಪ್ರಾರ್ಥಿಸಿ ಅರ್ಚಕರು ಪರ್ಜನ್ಯ ಜಪ ನಡೆಸಿದ್ದಾರೆ.
ಇನ್ನು, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಪಾರ್ವತಿ ಬೆಟ್ಟದಲ್ಲೂ ವರುಣನಿಗಾಗಿ ಪರ್ಜನ್ಯ ಜಪ ನಡೆಸಲಾಗಿದೆ.
TAGGED:
Puja, rain,parjnya,