ಚಾಮರಾಜನಗರ:ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಕಾಡಂಚಿನ ಗ್ರಾಮವಾದ ಗೋಪಿನಾಥಂ ಶಾಲೆಯಲ್ಲಿ ವಾಸ್ತವ್ಯ ಹೂಡಲು ಆಗಮಿಸುತ್ತಿದ್ದಾರೆ. ಆದರೆ, ಮೀಣ್ಯಂನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪಾಲಕರು ಬೀಗ ಜಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಶಿಕ್ಷಣ ಸಚಿವರ ಭೇಟಿ ದಿನವೇ ಶಾಲೆಗೆ ಬೀಗ ಜಡಿದ ಪಾಲಕರು... ಯಾಕಂತಿರಾ? - ಚಾಮರಾಜನಗರ ಪೋಷಕರ ಪ್ರತಿಭಟನೆ
ಶಾಲೆಯ ಮುಖ್ಯಶಿಕ್ಷಕ ಬಾಲು ನಾಯ್ಕ ಎಂಬುವರು ಸೆಪ್ಟಂಬರ್ ನಲ್ಲೇ ಬೇರೆ ಶಾಲೆಗೆ ನಿಯೋಜನೆಯಾಗಿದ್ದರೂ ತೆರಳದೇ ರಾಜಕೀಯ ಮಾಡುತ್ತಿದ್ದಾರೆ. ಮುಖ್ಯ ಶಿಕ್ಷಕರಾಗಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡದ ಬಾಲು ನಾಯ್ಕ್ ಅವರು ನಿಯೋಜನೆಯಾಗಿರುವ ಅಂಬಿಕಾಪುರಕ್ಕೆ ಹೋಗುವ ತನಕ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದು ಶಾಲೆಗೆ ಬೀಗ ಜಡಿದಿದ್ದಾರೆ.

ಶಿಕ್ಷಣ ಸಚಿವರ ಭೇಟಿ ದಿನವೇ ಶಾಲೆಗೆ ಬೀಗ ಜಡಿದ ಪಾಲಕರು... ಯಾಕಂತಿರಾ!?
ಶಿಕ್ಷಣ ಸಚಿವರ ಭೇಟಿ ದಿನವೇ ಶಾಲೆಗೆ ಬೀಗ ಜಡಿದ ಪಾಲಕರು... ಯಾಕಂತಿರಾ!?
ಹೌದು, ಶಾಲೆಯ ಮುಖ್ಯಶಿಕ್ಷಕ ಬಾಲು ನಾಯ್ಕ ಎಂಬುವರು ಸೆಪ್ಟಂಬರ್ ನಲ್ಲೇ ಬೇರೆ ಶಾಲೆಗೆ ನಿಯೋಜನೆಯಾಗಿದ್ದರೂ ತೆರಳದೇ ರಾಜಕೀಯ ಮಾಡುತ್ತಿದ್ದಾರೆ. ಮುಖ್ಯ ಶಿಕ್ಷಕರಾಗಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡದ ಬಾಲು ನಾಯ್ಕ್ ಅವರು ನಿಯೋಜನೆಯಾಗಿರುವ ಅಂಬಿಕಾಪುರಕ್ಕೆ ಹೋಗುವ ತನಕ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ.
ಇನ್ನು ಪಾಲಕರ ಪ್ರತಿಭಟನೆಗೆ ಮಕ್ಕಳು ಕೂಡ ಕೈಜೋಡಿಸಿದ್ದು, ತಮಗೆ ಬೇರೆ ಮುಖ್ಯಶಿಕ್ಷಕರನ್ನು ನಿಯೋಜಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತು ಮಂಗಳವಾರ ಶಿಕ್ಷಣ ಸಚಿವರಿಗೆ ಮನವಿ ಪತ್ರ ನೀಡುವುದಾಗಿ ವಿದ್ಯಾರ್ಥಿಗಳ ಪಾಲಕರು ತಿಳಿಸಿದ್ದಾರೆ.