ಕರ್ನಾಟಕ

karnataka

ಕೊಳ್ಳೇಗಾಲದ ಮನೆಯೊಂದರಲ್ಲಿ ಚಿಪ್ಪು ಹಂದಿ ಪ್ರತ್ಯಕ್ಷ

By

Published : Oct 10, 2020, 2:32 PM IST

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮನೆಯೊಂದರಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಯಾದ ಚಿಪ್ಪುಹಂದಿ ಕಾಣಿಸಿಕೊಂಡು ಕುತೂಹಲ ಮೂಡಿಸಿದೆ.

Pangolin rescued from a house in Kollegala
ಚಿಪ್ಪು ಹಂದಿ

ಕೊಳ್ಖೇಗಾಲ:ತಾಲೂಕಿನ ನಗರದ ಭೀಮನಗರದ ದಿಡ್ಡದಕೇರಿ ಬಡಾವಣೆಯ ನವೀನ್ ಎಂಬುವರ ಮನೆಯಲ್ಲಿ ಚಿಪ್ಪು ಹಂದಿ ಪ್ರತ್ಯಕ್ಷವಾಗಿದೆ.

ಚಿಪ್ಪು ಹಂದಿ

ನವೀನ್ ಮನೆ ಕೆಲಸದಲ್ಲಿ ನಿರತರಾಗಿದ್ದಾಗ ಕೊಠಡಿಯ ಮೂಲೆಯಲ್ಲಿ ಅವಿತು ಕುಳಿತಿದ್ದ ಚಿಂಪು ಹಂದಿಯನ್ನು ಕಂಡು ‌ ಗಾಬರಿಯಾಗಿದ್ದಾರೆ. ನಂತರ ಈ ಬಗ್ಗೆ ಉರಗ ತಜ್ಞ ಸ್ನೇಕ್ ರಘು‌ ಅವರಿಗೆ ಮಾಹಿತಿ‌ ನೀಡಿದ್ದಾರೆ.

ಸ್ಥಳಕ್ಕೆ ಬಂದ ಸ್ನೇಕ್​ ರಘು ಚಿಂಪು ಹಂದಿಯನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ. ಬಳಿಕ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿ, ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಬಿಆರ್‌ಟಿ ಅರಣ್ಯ ವ್ಯಾಪ್ತಿಯ ಗುಂಡಾಲ್ ಸಮೀಪದ ಕಾಡಿಗೆ ಚಿಪ್ಪುಹಂದಿಯನ್ನು ಬಿಡಲಾಗಿದೆ.

ABOUT THE AUTHOR

...view details