ಕರ್ನಾಟಕ

karnataka

ETV Bharat / state

ನಮ್ದು ಲೇಡಿಸ್ ಪಂಚಾಯ್ತಿ ಆಗೋಗಿದೆ ಸಾರ್​.. ಜೆಂಟ್ಸ್​​​ ಸಿಬ್ಬಂದಿ ಹಾಕಿ.. - Minister Suresh kumar

ಸಚಿವ ಸುರೇಶ್ ಕುಮಾರ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಗ್ರಾಪಂ ಸದಸ್ಯರೊಬ್ಬರು ಈ ರೀತಿಯ ಮನವಿ ಮಾಡಿದರು..

ಸಚಿವರ ಎದುರು ಸದಸ್ಯನ ಮನವಿ
ಸಚಿವರ ಎದುರು ಸದಸ್ಯನ ಮನವಿ

By

Published : May 28, 2021, 5:49 PM IST

ಚಾಮರಾಜನಗರ : ಗ್ರಾ.ಪಂ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ, ಅಧಿಕಾರಿಗಳು ಎಲ್ಲರೂ ಮಹಿಳೆಯರೇ ಇದ್ದಾರೆ, ಹೆಚ್ಚು ಕಷ್ಟ-ಸುಖ ಹೇಳಕ್ಕಾಗಲ್ಲ, ಪುರುಷ ಸಿಬ್ಬಂದಿ ನೇಮಿಸಿ ಎಂದು ಸಚಿವರಿಗೆ ಗ್ರಾಪಂ ಸದಸ್ಯ ಮನವಿ ಮಾಡಿರುವ ಪ್ರಸಂಗ ನಡೆದಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಆಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ರವಿ ಕುಮಾರ್ ಎಂಬ ಗ್ರಾಪಂ ಸದಸ್ಯ ಈ ರೀತಿಯ ಮನವಿ ಮಾಡಿದ್ದು, ಸಚಿವರ ಅಚ್ಚರಿಗೆ ಕಾರಣವಾಯಿತು.

ನಮ್ದು ಲೇಡಿಸ್ ಪಂಚಾಯ್ತಿ ಆಗೋಗಿದೆ ಸಾರ್​.. ಜೆಂಟ್ಸ್​​​ ಸಿಬ್ಬಂದಿ ಹಾಕಿ..

ನಮ್ದು ಲೇಡಿಸ್ ಪಂಚಾಯ್ತಿ ಆಗೋಗಿದೆ, ಜೆಂಟ್ಸ್ ಹಾಕಿ ಸರ್ ಎಂದು ಸಚಿವರ ಬಳಿ ಬೇಟಿಕೆ ಇಟ್ಟ. ಆದರೆ, ಸಚಿವರು ಇದಕ್ಕೆ ಉತ್ತರಿಸಿ ಯಾಕೆ ಮಹಿಳೆಯರು ಕೆಲಸ ಮಾಡುತ್ತಿಲ್ಲವೇ‌.? ಎಂದು ಪ್ರಶ್ನೆ ಮಾಡಿ ಮುಂದೆ ಸಾಗಿದರು.

ABOUT THE AUTHOR

...view details