ಕರ್ನಾಟಕ

karnataka

ಚಾಮರಾಜನಗರ: ಗಮನ ಸೆಳೆದ ರಾಜ್ಯದ ಕಟ್ಟೆಕಡೆಯ ಊರಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆ

By ETV Bharat Karnataka Team

Published : Jan 17, 2024, 6:05 PM IST

Updated : Jan 17, 2024, 7:37 PM IST

ಸಂಕ್ರಾಂತಿ ಹಬ್ಬದ ಪ್ರಯುಕ್ತ ಹನೂರು ತಾಲೂಕಿನ ಗೋಪಿನಾಥಂನಲ್ಲಿ ಇಂದು ಹೋರಿ ಬೆದರಿಸಿ ಗ್ರಾಮಸ್ಥರು ಸಂಭ್ರಮಿಸಿದರು.

Etv Bharatox-bullying-competition-in-chamarajanagara
ಚಾಮರಾಜನಗರ: ಗಮನ ಸೆಳೆದ ರಾಜ್ಯದ ಕಟ್ಟೆಕಡೆಯ ಊರಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆ

ಹೋರಿ ಬೆದರಿಸುವ ಸ್ಪರ್ಧೆ

ಚಾಮರಾಜನಗರ: ರಾಜ್ಯದ ಕಟ್ಟಕಡೆಯ ಗ್ರಾಮವಾದ ಹನೂರು ತಾಲೂಕಿನ ಗೋಪಿನಾಥಂನಲ್ಲಿ ಇಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಹೋರಿ ಬೆದರಿಸುವ ಸ್ಪರ್ಧೆ ಜರುಗಿತು. ಸಂಕ್ರಾಂತಿ ದಿನದಂದು ಕಿಚ್ಚು ಹಾಯಿಸುವ ಸಂಪ್ರದಾಯದಂತೆ ಗೋಪಿನಾಥಂ ಗ್ರಾಮದಲ್ಲಿ ಹೋರಿ ಬೆದರಿಸಿದ್ದು, ಈ ವೇಳೆ ಯುವಕರು ಸೇರಿದಂತೆ ಹಿರಿಯರು ಕೂಡ ಇದರಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ.

ಗ್ರಾಮದ ಮಾರಿಯಮ್ಮ ದೇಗುಲ‌ದ ಮುಂಭಾಗ ಜಮಾಯಿಸಿದ್ದ ಹೊಗೆನಕಲ್, ಆಲಂಬಾಡಿ, ಪುದೂರಿನ‌ ಗ್ರಾಮಸ್ಥರು ಹೋರಿಗಳಿಗೆ ಬೆದರು ಬೊಂಬೆ ತೋರಿಸಿ ರೊಚ್ಚಿಗೆಬ್ಬಿಸಿ ಕಾದಾಡಿದ್ದಾರೆ.‌ ಇಂದು 50 ಹೋರಿಗಳನ್ನು ಬೆದರಿಸಿದ್ದು, ಎತ್ತುಗಳಿಗೆ ಎಳೆಯುವ ಶಕ್ತಿ ಹೆಚ್ಚಾಗಲಿ, ದುಷ್ಟ ಶಕ್ತಿಗಳು ಹತ್ತಿರ ಸುಳಿಯದಿರಲೆಂದು ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಹೋರಿಯ ಎಡ-ಬಲವನ್ನು ಹಗ್ಗದಿಂದ ಹಿಡಿಯುವ 10ಕ್ಕೂ ಹೆಚ್ಚು ಯುವಕರು, ಬೆದರು ಬೊಂಬೆಯನ್ನು ತೋರಿಸಿ ಅದನ್ನು ರೊಚ್ಚಿಗೆಬ್ಬಿಸುತ್ತಾರೆ. 10-12 ಮಂದಿಯ ಹಿಡಿತವನ್ನು ಲೆಕ್ಕಿಸದ ಎತ್ತುಗಳು ಬೆದರು ಬೊಂಬೆಯನ್ನು ತಿವಿದು, ಬಿಸಾಕುತ್ತವೆ. ಇದು ಜಲ್ಲಿಕಟ್ಟಿನಷ್ಟು ಅಪಾಯಕಾರಿ ಅಲ್ಲ. ಆದರೂ ಜಾಗೃತರಾಗಿರುವುದು ಅವಶ್ಯಕ. ರೈತರ ಹಬ್ಬ ಸಂಕ್ರಾಂತಿಯನ್ನು ಒಂದೊಂದು ಪ್ರದೇಶದಲ್ಲಿ ಒಂದು ವಿಶೇಷತೆಯೊಂದಿಗೆ ಆಚರಿಸಲಾಗುತ್ತಿದೆ. ಹೋರಿ ಬೆದರಿಸೋದು ಸಂಕ್ರಾಂತಿ ಸಡಗರವನ್ನು ಈ ಗ್ರಾಮದಲ್ಲಿ ಇಮ್ಮಡಿಗೊಳಿಸಿದೆ.

ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಬಿದ್ದು ಗಾಯಗೊಂಡ ಪೈಲ್ವಾನರು(ಹಾವೇರಿ):ಕಳೆದ ತಿಂಗಳು, ರಾಜ್ಯಮಟ್ಟದ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ಹಿಡಿಯಲು ಹೋಗಿದ್ದ ಪೈಲ್ವಾನರು ನೆಲಕ್ಕೆ ಬಿದ್ದು ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಲ್ಲೇದೇವರು ಗ್ರಾಮದಲ್ಲಿ ನಡೆದಿತ್ತು. ಈ ಗ್ರಾಮದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಕೆಲ ಪೈಲ್ವಾನರಿಗೆ ಹೋರಿ ಹಿಡಿಯುವ ವೇಳೆ ಕೊಬ್ಬರಿ ಹೋರಿಗಳು ಗುದ್ದಿದ್ದವು. ಹೋರಿಗಳು ಗುದ್ದಿದ ರಭಸಕ್ಕೆ ನೆಲಕ್ಕೆ ಬಿದ್ದ ಹೋರಿ ಹಿಡಿಯುವ ಯುವಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸ್ಪರ್ಧೆಗೆ ಹಾವೇರಿ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಹೋರಿಗಳು ಆಗಮಿಸಿದ್ದವು.

ಜಿಲ್ಲೆಯ ಗ್ರಾಮೀಣ ಸೊಗಡಿನ ಕ್ರೀಡೆಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಒಂದಾಗಿದ್ದು, ದೀಪಾವಳಿ ನಂತರ ಈ ಸ್ಪರ್ಧೆಗಳನ್ನು ಜಿಲ್ಲೆಯಲ್ಲಿ ಆಯೋಜಿಸಲಾಗುತ್ತದೆ. ಸ್ಪರ್ಧೆಯಲ್ಲಿ ಹೋರಿಗಳಿಗೆ ಕೊಬ್ಬರಿ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ಕಟ್ಟಲಾಗುತ್ತಿದ್ದು, ಕೊಬ್ಬರಿ ಹರಿಯಲು ಯುವಕರು ಜೀವದ ಹಂಗು ತೊರೆದು ಮುಂದಾಗುತ್ತಾರೆ. ಈ ಸಂದರ್ಭದಲ್ಲಿ ಕೆಲವು ಅವಘಡಗಳು ಸಂಭವಿಸಿರುವ ನಿದರ್ಶನಗಳಿವೆ.

ಇದನ್ನೂ ಓದಿ:ಮಿಂಚಿನ ಓಟ ನಿಲ್ಲಿಸಿದ ಸೊರಬದ ಚಾಮುಂಡಿ ಎಕ್ಸ್​ಪ್ರೆಸ್.. ಅಭಿಮಾನಿಗಳಿಂದ ಕಂಬನಿ

Last Updated : Jan 17, 2024, 7:37 PM IST

ABOUT THE AUTHOR

...view details