ಗುಂಡ್ಲುಪೇಟೆ (ಚಾಮರಾಜನಗರ):ತಾಲೂಕಿನ ಕಬ್ಬಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 5ಕೆಜಿ 100 ಗ್ರಾಂ ತೂಕದ ಮಗು ಜನಿಸಿದ್ದು, ಅಚ್ಚರಿಗೆ ಕಾರಣವಾಗಿದೆ.
ಗುಂಡ್ಲುಪೇಟೆಯಲ್ಲಿ 5 ಕೆ.ಜಿ. ತೂಕದ ಮಗು ಜನನ - 5ಕೆಜಿ 100 ಗ್ರಾಂ ತೂಕದ ಮಗು
5ಕೆಜಿ 100 ಗ್ರಾಂ ತೂಕದ ಮಗು ಜನಿಸಿದ್ದು, ಸಿಜೇರಿಯನ್ ಮೂಲಕ ಹೆರಿಗೆ ಮಾಡಲಾಗಿದೆ.

baby
ತೆರಕಣಾಂಬಿ ಗ್ರಾಮದ ಕಿಶೋರ್ ಎಂಬುವರ ಪತ್ನಿ ಅನುಸೂಯ ಅವರು ಮಗುವಿಗೆ ಜನ್ಮ ನೀಡಿದ್ದಾರೆ. ಸಿಜೇರಿಯನ್ ಮೂಲಕ ಹೆರಿಗೆ ಮಾಡಲಾಗಿದೆ.
ಸಮಾನ್ಯವಾಗಿ ಜನಿಸುವ ಮಗು ಎರಡುವರೆ ಕೆಜಿಯಿಂದ ನಾಲ್ಕು ಕೆಜಿಯಷ್ಟು ಇರುತ್ತದೆ. ಈ ಮಗು ತೂಕದಲ್ಲಿ ಹೆಚ್ಚಿದ್ದರೂ ಸಹ ಆರೋಗ್ಯವಾಗಿದೆ ಎಂದು ವೈದ್ಯ ಡಾ.ವೆಂಕಟಸ್ವಾಮಿ ತಿಳಿಸಿದರು.