ಕರ್ನಾಟಕ

karnataka

ETV Bharat / state

ಶಾಸಕ ಎನ್ ಮಹೇಶ್ ವಿರುದ್ಧ ಆರೋಪಿಸಿದ್ರೆ ಕಾನೂನು ಹೋರಾಟದ ಎಚ್ಚರಿಕೆ - ಚಾಮರಾಜನಗರ ಸುದ್ದಿ

ಬಿಎಸ್​ಪಿ ಅಧಿನಾಯಕಿ ಮಾಯಾವತಿ, ಪಕ್ಷದಿಂದ ಶಾಸಕರನ್ನು ಉಚ್ಛಾಟಿಸಿದ್ದರಿಂದ ಮಹೇಶ್​ ಅವರು ಸ್ವತಂತ್ರ ಶಾಸಕ ಎಂದು ಹೇಳಿದ್ದಾರೆ ಅಷ್ಟೇ.. ಆದರೆ, ಎಲ್ಲೂ ಪಕ್ಷೇತರ ಶಾಸಕ ಎಂದು ಹೇಳಿಕೊಂಡಿಲ್ಲ. 20% ಕಮಿಷನ್ ಪಡೆಯುತ್ತಾರೆ ಎಂಬ ಮಾತಿಗೆ ಆಧಾರ ನೀಡಲಿ..

outrage of MLA N Mahesh fans group
ಶಾಸಕ ಎನ್ ಮಹೇಶ್ ಅಭಿಮಾನಿ ಬಳಗದ ಆಕ್ರೋಶ

By

Published : Sep 1, 2020, 8:48 PM IST

ಕೊಳ್ಳೇಗಾಲ(ಚಾಮರಾಜನಗರ) :ಶಾಸಕ ಎನ್‌ ಮಹೇಶ್ ವಿರುದ್ಧ ಬಿಎಸ್​ಪಿ​ ಇಲ್ಲಸಲ್ಲದ ಆರೋಪಗಳನ್ನ ಮಾಡುತ್ತಿದೆ. ಇದನ್ನ ಎಂದಿಗೂ ಸಹಿಸೋದಿಲ್ಲ ಅಂತಾ ಎನ್‌ ಮಹೇಶ್‌ ಅಭಿಮಾನಿಗಳ ಬಳಗದ ಮುಖಂಡ ಸಿದ್ದರಾಜ ಖಡಕ್ ಆಗಿ ಹೇಳಿದ್ದಾರೆ.

ಮೂರು ದಿನಗಳ ಹಿಂದೆಯಷ್ಟೆ ಸುದ್ದಿಗೋಷ್ಠಿಯಲ್ಲಿ ಎನ್. ಮಹೇಶ್ 20 ಪರ್ಸೆಂಟ್ ಕಮಿಷನ್ ಪಡೆದು ಕಾಮಗಾರಿ ಮಾಡಿಸುತ್ತಾರೆ. ಬಿಎಸ್​ಪಿಯಿಂದ ಗೆದ್ದು ಉಚ್ಛಾಟಿತನಾದ ಮೇಲೆ ನಾನು ಸ್ವತಂತ್ರ ಶಾಸಕ ಹಾಗೂ ಪಕ್ಷೇತರ ಶಾಸಕ ಎಂದು ಹೇಳಿಕೆ ನೀಡುತ್ತಾರೆ ಎಂದು ಬಿಎಸ್​ಪಿ ಆರೋಪಿಸಿತ್ತು. ಇದಕ್ಕೆ ಶಾಸಕರ ಅಭಿಮಾನಿಗಳ ಬಳಗ ಆಕ್ಷೇಪ ವ್ಯಕ್ತಪಡಿಸಿದೆ.

ಶಾಸಕ ಎನ್ ಮಹೇಶ್ ಅಭಿಮಾನಿ ಬಳಗದ ಆಕ್ರೋಶ

ಬಿಎಸ್​ಪಿ ಅಧಿನಾಯಕಿ ಮಾಯಾವತಿ, ಪಕ್ಷದಿಂದ ಶಾಸಕರನ್ನು ಉಚ್ಛಾಟಿಸಿದ್ದರಿಂದ ಮಹೇಶ್​ ಅವರು ಸ್ವತಂತ್ರ ಶಾಸಕ ಎಂದು ಹೇಳಿದ್ದಾರೆ ಅಷ್ಟೇ.. ಆದರೆ, ಎಲ್ಲೂ ಪಕ್ಷೇತರ ಶಾಸಕ ಎಂದು ಹೇಳಿಕೊಂಡಿಲ್ಲ. 20% ಕಮಿಷನ್ ಪಡೆಯುತ್ತಾರೆ ಎಂಬ ಮಾತಿಗೆ ಆಧಾರ ನೀಡಲಿ. ಇಂತಹ ಕೆಟ್ಟ ಆರೋಪ ಮಾಡಿದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ.

ಈ ರೀತಿ ಇಲ್ಲಸಲ್ಲದ ಆರೋಪಗಳನ್ನು ಎನ್.ಮಹೇಶ್ ವಿರುದ್ಧ ಬಿಎಸ್​ಪಿ ಅಧ್ಯಕ್ಷ ರಾಜಶೇಖರ್ ಮಾಡಬಾರದು. ಇಂತವರ ಮೇಲೆ ಬಿಎಸ್​ಪಿ ರಾಜ್ಯ ಮುಖಂಡರು ಕ್ರಮ ತೆಗೆದುಕೊಂಡು ಗಲಭೆಗೆ ಪ್ರೇರೇಪಿಸುವ ಮಾತುಗಳನ್ನಾಡುವವರನ್ನು ಹದ್ದುಬಸ್ತಿನಲ್ಲಿರಿಸಬೇಕು ಎಂದು ಸಿದ್ದರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details