ಚಾಮರಾಜನಗರ: ಪ್ರತಿಷ್ಠಿತ ರಾಷ್ಟ್ರೀಯ ನಿಯತಕಾಲಿಕೆ ಔಟ್ ಲುಕ್ ಟ್ರಾವೆಲರ್ ನೀಡುವ ಪ್ರಶಸ್ತಿಗೆ ಈ ಬಾರಿ ಬಂಡೀಪುರ ಅಭಯಾರಣ್ಯ ಪಾತ್ರವಾಗಿದೆ.
ಔಟ್ಲುಕ್ ಟ್ರಾವೆಲರ್ ಅವಾರ್ಡ್... ಬಂಡೀಪುರಕ್ಕೆ ಉತ್ತಮ ಅಭಯಾರಣ್ಯ ಗರಿ! - ಚಾಮರಾಜನಗರ ಸುದ್ದಿ
ಪ್ರತಿಷ್ಠಿತ ರಾಷ್ಟ್ರೀಯ ನಿಯತಕಾಲಿಕೆ ಔಟ್ ಲುಕ್ ಟ್ರಾವೆಲ್ಲರ್ ನೀಡುವ ಪ್ರಶಸ್ತಿಗೆ ಈ ಬಾರಿ ಬಂಡೀಪುರ ಅಭಯಾರಣ್ಯ ಪಾತ್ರವಾಗಿದೆ.
bandipur-sanctuary
25 ವಿಭಾಗಗಳಲ್ಲಿ ಪ್ರಶಸ್ತಿ ಇರಲಿದ್ದು, ಬೆಸ್ಟ್ ನ್ಯಾಷನಲ್ ಪಾರ್ಕ್ ವಿಭಾಗದಲ್ಲಿ ಬಂಡೀಪುರ ಅಭಯಾರಣ್ಯಕ್ಕೆ ಪ್ರಶಸ್ತಿ ಸಂದಿದೆ. ಈ ಕುರಿತು ಬಂಡೀಪುರ ಸಿಎಫ್ಒ ಬಾಲಚಂದ್ರ ಮಾತನಾಡಿ, ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ. ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಲಿರುವ ಜೊತಗೆ ಪ್ರವಾಸಿಗರ ಸಂಖ್ಯೆಯಲ್ಲೂ ಹೆಚ್ಚಳವಾಗಬಹುದು ಎಂದಿದ್ದಾರೆ. ಡಿಸ್ಕವರಿ ಚಾನೆಲ್ನಲ್ಲಿ ಪ್ರಸಾರವಾಗುವ ಮ್ಯಾನ್ ವರ್ಸಸ್ ವೈಲ್ಡ್ನ ವಿಶೇಷ ಸಂಚಿಕೆಗಾಗಿ ಸೂಪರ್ ಸ್ಟಾರ್ ರಜಿನಿಕಾಂತ್ ಹಾಗೂ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಬಂಡೀಪುರದಲ್ಲಿ ಬೀಡುಬಿಟ್ಟು ಪ್ರಕೃತಿಯ ಸೊಬಗನ್ನು ಗುಣಗಾನ ಮಾಡಿದ್ದರು.