ಕರ್ನಾಟಕ

karnataka

ETV Bharat / state

'ನಮ್ದು' ಬ್ರಾಂಡ್​​ನಡಿ ಸಾವಯವ ಉತ್ಪನ್ನ, ಗಾಂಧಿ ಕಲ್ಪನೆ-ಎಂಡಿಎನ್ ಆಶಯ ಕಾರ್ಯರೂಪ - ಮಹಾತ್ಮಾ ಗಾಂಧಿ ಅವರ ಸ್ವರಾಜ್ಯ ಕಲ್ಪನೆ

ನೈಸರ್ಗಿಕ ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ವಿಷಮುಕ್ತ ಆಹಾರೋತ್ಪನ್ನಗಳ ನೇರ ಮಾರಾಟ ಮಳಿಗೆಯಾಗಿದೆ. ಎಲ್ಲಾ ಜಿಲ್ಲಾ ಕೇಂದ್ರಗಳು, ತಾಲೂಕು ಕೇಂದ್ರಗಳಲ್ಲಿ ತೆರೆಯುವ ಉದ್ದೇಶವನ್ನು ಕೃಷಿಕ ಸಮಾಜ ಹಾಕಿಕೊಂಡಿದ್ದು, ಸಾವಯವ ತಿನಿಸುಗಳು, ದ್ವಿದಳ-ಏಕದಳ ಧಾನ್ಯಗಳು, ಸೊಪ್ಪು- ತರಕಾರಿ ಈ ಮಳಿಗೆಯಲ್ಲಿ ಸಿಗಲಿದೆ..

organic-product-under-the-namdu-brand-in-chamarajanagara
'ನಮ್ದು' ಬ್ರಾಂಡ್​​ನಡಿ ಸಾವಯವ ಉತ್ಪನ್ನ, ಗಾಂಧಿ ಕಲ್ಪನೆ-ಎಂಡಿಎನ್ ಆಶಯಕ್ಕೆ ಕಾರ್ಯರೂಪ

By

Published : Oct 2, 2020, 5:55 PM IST

ಚಾಮರಾಜನಗರ :ಮಹಾತ್ಮಾ ಗಾಂಧಿ ಅವರ ಸ್ವರಾಜ್ಯ ಕಲ್ಪನೆ ಹಾಗೂ ಪ್ರೊ. ಎಂ ಡಿ ನಂಜುಂಡಸ್ವಾಮಿ ಅವರ ಆಶಯದಂತೆ ರೈತರು 'ನಮ್ದು ಬ್ರಾಂಡಿನಡಿ' ಉತ್ಪನ್ನ ಮಾರಾಟ ಮಳಿಗೆ ಆರಂಭಿಸಿದ್ದಾರೆ.

'ನಮ್ದು' ಬ್ರಾಂಡ್​​ನಡಿ ಸಾವಯವ ಉತ್ಪನ್ನ, ಗಾಂಧಿ ಕಲ್ಪನೆ-ಎಂಡಿಎನ್ ಆಶಯಕ್ಕೆ ಕಾರ್ಯರೂಪ

ಗ್ರಾಮ ಸ್ವರಾಜ್ಯ ಕಲ್ಪನೆಯಂತೆ ಮಧ್ಯವರ್ತಿಗಳ ಕಾಟವಿಲ್ಲದೇ, ರೈತರೇ ತಮ್ಮ ಉತ್ಪನ್ನಗಳನ್ನು ನೇರ ಗ್ರಾಹಕರಿಗೆ ಪ್ರತ್ಯೇಕ ಬ್ರ್ಯಾಂಡ್ ಮೂಲಕ ಮಾರಾಟ ಮಾಡಬೇಕೆಂಬ ಪ್ರೊ. ಎಂ ಡಿ ನಂಜುಂಡಸ್ವಾಮಿ ಅವರ ಕನಸನ್ನು ಸಾಕಾರಗೊಳಿಸಲು ರೈತರು ಇಂದಿನಿಂದ ಅಡಿಯಿಟ್ಟರು.

ಚಾಮರಾಜನಗರದದ ಹೌಸಿಂಗ್ ಬೋರ್ಡ್ ಕಾಲೋನಿಯ ತಹಶೀಲ್ದಾರ್ ನಿವಾಸದ ಸಮೀಪ ರಾಜ್ಯ ರೈತ ಸಂಘ, ಹೊಂಡರಬಾಳಿನ ಅಮೃತಭೂಮಿ ಹಾಗೂ ಇನ್ನಿತರ ರೈತರ ಸಂಘಗಳು ನಮ್ದು ಎಂಬ ಸಾವಯವ ಉತ್ಪನ್ನದ ಮಳಿಗೆ ತೆರೆಯಲಾಯಿತು. ವಿಶೇಷವೆಂದ್ರೆ, ರೈತರ ಬ್ರ್ಯಾಂಡ್‌ಗೆ ‘ನಮ್ದು’ ಎಂಬ ಹೆಸರನ್ನೂ ಈ ಹಿಂದೆ ಪ್ರೊ.ಎಂಡಿಎನ್ ನೀಡಿದ್ದರು.

ನೈಸರ್ಗಿಕ ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ವಿಷಮುಕ್ತ ಆಹಾರೋತ್ಪನ್ನಗಳ ನೇರ ಮಾರಾಟ ಮಳಿಗೆಯಾಗಿದೆ. ಎಲ್ಲಾ ಜಿಲ್ಲಾ ಕೇಂದ್ರಗಳು, ತಾಲೂಕು ಕೇಂದ್ರಗಳಲ್ಲಿ ತೆರೆಯುವ ಉದ್ದೇಶವನ್ನು ಕೃಷಿಕ ಸಮಾಜ ಹಾಕಿಕೊಂಡಿದ್ದು, ಸಾವಯವ ತಿನಿಸುಗಳು, ದ್ವಿದಳ-ಏಕದಳ ಧಾನ್ಯಗಳು, ಸೊಪ್ಪು- ತರಕಾರಿ ಈ ಮಳಿಗೆಯಲ್ಲಿ ಸಿಗಲಿದೆ. ಶೀಘ್ರವಾಗಿ ಕಷಾಯ, ಕಬ್ಬಿನ ಹಾಲನ್ನು ಮಾರಾಟ ಮಾಡಲಾಗುವುದು ಎಂದು ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್ ತಿಳಿಸಿದರು.

ನೈಸರ್ಗಿಕ ಕೃಷಿಕರು ಒಂದೇ ಸೂರಿನಡಿ ಬಂದು ಪ್ರತ್ಯೇಕ ಬ್ರಾಂಡ್ ಮೂಲಕ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಮುಂದಾಗಿರುವುದು ಆಶಾದಾಯಕ ಬೆಳವಣಿಗೆ. ಈ ಮೂಲಕ, ಗಾಂಧಿ ಅವರ ಗ್ರಾಮ ಸ್ವರಾಜ್ಯ ಕಲ್ಪನೆ ಸಾಕಾರಗೊಳ್ಳಲಿದೆ.

ABOUT THE AUTHOR

...view details