ಚಾಮರಾಜನಗರ: ಚಾಮರಾಜನಗರ ತಾಲೂಕಿನ ವಿವಿಧೆಡೆ ಇಂದು ಸುರಿದ ಭಾರೀ ಮಳೆ ಈರುಳ್ಳಿ ಬೆಳೆಗಾರರರಲ್ಲಿ ಕಣ್ಣೀರು ತರಿಸಿದ್ದು, ಇದೀಗ ಈರುಳ್ಳಿ ಬೆಳೆ ಕೈ ಕೊಡುವ ಆತಂಕ ಮನೆ ಮಾಡಿದೆ.
ಜೋರು ಮಳೆ ಸುರಿದ ಪರಿಣಾಮ ಕೋಡಿಮೋಳೆ ಗ್ರಾಮದ ಹತ್ತಾರು ರೈತರ ಜಮೀನುಗಳಲ್ಲಿ ಎರಡು ಅಡಿ ನೀರು ನಿಂತಿದ್ದು ಸಾಲ ಮಾಡಿ ಈರುಳ್ಳಿ ಬಿತ್ತನೆ ಮಾಡಿದ್ದವರು ಈಗ ಇಳುವರಿ ಕಳೆದುಕೊಳ್ಳುವ ಜೊತೆಗೆ ಸಂಪೂರ್ಣ ಬೆಳೆಯೇ ಕೈ ಕೊಡುವ ದುಗುಡ ಹೊರಹಾಕಿದ್ದಾರೆ. ಕೆಲವು ಗ್ರಾಮಗಳ ಅರಿಶಿಣ ಬೆಳೆಗಾರರಲ್ಲೂ ಇದೇ ಪರಿಸ್ಥಿತಿ ಅತೀ ತೇವಾಂಶದಿಂದ ಫಸಲು ನಷ್ಟವಾಗುವ ಭೀತಿ ಎದುರಿಸುತ್ತಿದ್ದಾರೆ.