ಕೊಳ್ಳೇಗಾಲ (ಚಾಮರಾಜನಗರ): ಸಾಕು ನಾಯಿಗಳ ಸಹಾಯದಿಂದ ಉಡ ಬೇಟಿಯಾಡಿದ್ದ ತಾಲೂಕಿನ ಸತ್ತೇಗಾಲ ಸಮೀಪದ ಜಾಗೇರಿಯ ರಾಶಿಬೋಳನದೊಡ್ಡಿ ಗ್ರಾಮದ ಪ್ರವೀಣ್ ಎಂಬಾತನನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ರಮೇಶ್ ಎಂಬಾತನು ಪರಾರಿಯಾಗಿದ್ದಾನೆ.
ಮಹದೇಶ್ವರ ವನ್ಯಧಾಮ ಜಾಗೇರಿ ಅರಣ್ಯಪ್ರದೇಶದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾವನ್ನು ಅರಣ್ಯಾಧಿಕಾರಿಗಳು ಪರೀಶೀಲಿಸುವಾಗ ಮೇ 20 ರಂದು ಪ್ರವೀಣ್ ಹಾಗೂ ರಮೇಶ್ ಎಂಬ ಆರೋಪಿಗಳು ಅಕ್ರಮವಾಗಿ ಅರಣ್ಯದೊಳಗೆ ನುಗ್ಗಿ, ಸಾಕುನಾಯಿಗಳ ಮುಖೇನ ಉಡವನ್ನು ಭೇಟೆಯಾಡಿ ಪರಾರಿಯಾಗಿರುವುದು ತಿಳಿದು ಬಂದಿದೆ.