ಕರ್ನಾಟಕ

karnataka

ETV Bharat / state

ಮೊಲದ ಬೇಟೆಗೆ ತೆರಳಿದ ಮೂವರು ಯುವಕರಲ್ಲಿ ಓರ್ವ ಬಲಿ: ಅಕ್ರಮ ವಿದ್ಯುತ್ ಸ್ಪರ್ಶ ಶಂಕೆ - chamarajanaga news

ಮೊಲದ ಬೇಟೆಗೆ ತೆರಳಿದ್ದ ಮೂವರು ಯುವಕರಲ್ಲಿ ಓರ್ವ ಯುವಕ ಸಾವಿಗೀಡಾಗಿದ್ದಾನೆ. ಜಮೀನಿನಲ್ಲಿ ಅಕ್ರಮ ವಿದ್ಯುತ್​ ಸ್ವರ್ಶಿಸಿ ಈ ರೀತಿಯಾಗಿ ಆಗಿದೆ ಎಂದು ಶಂಕಿಸಲಾಗಿದೆ.

One died who went hunt of rabbit on night in chamarajanaga
ಮೊಲದ ಬೇಟೆಗೆ ತೆರಳಿದ ಮೂವರು ಯುವಕರಲ್ಲಿ ಓರ್ವ ಬಲಿ

By

Published : Oct 17, 2021, 6:15 PM IST

ಚಾಮರಾಜನಗರ: ಮೊಲದ ಬೇಟೆಗೆ ತೆರಳಿದ್ದ ಮೂವರು ಯುವಕರಲ್ಲಿ ಓರ್ವ ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ಕುಮಾರ್(27) ಮೃತ ಯುವಕ. ಬೆಳೆ ರಕ್ಷಣೆಗೆ ಹಾಕಿದ್ದ ಅಕ್ರಮ ವಿದ್ಯುತ್ ಗೆ ಬಲಿಯಾಗಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಹುಂಡಿಮನೆ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ ಜಮೀನಿನ ಸಮೀಪ ಘಟನೆ ನಡೆದಿದ್ದು, ಇವರ ಜಮೀನಿನ ಬದಿಯಲ್ಲೇ ಗುಂಡ್ಲುಪೇಟೆ ಶಾಸಕ ನಿರಂಜನಕುಮಾರ್ ಅವರ ಜಮೀನು ಕೂಡ ಇದೆ‌.

ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಪೊಲೀಸರನ್ನು ಪ್ರಶ್ನಿಸಿದರೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸುತ್ತಿಲ್ಲ.

ABOUT THE AUTHOR

...view details