ಚಾಮರಾಜನಗರ: ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಮಂಗಲ ಗ್ರಾಮ ಸಮೀಪದ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಸಂಭವಿಸಿದೆ.
ಬೈಕ್ಗಳ ನಡುವೆ ಡಿಕ್ಕಿ: ಓರ್ವ ಸಾವು, ಮೂವರ ಸ್ಥಿತಿ ಗಂಭೀರ - chamarajanagara latest news
ಕಾಮಗೆರೆ ಗ್ರಾಮದ ಸಚಿನ್ ಮೃತಪಟ್ಟ ದುರ್ದೈವಿ. ಈತನ ಬೈಕ್‍ನ ಹಿಂಬದಿಯಲ್ಲಿ ಕುಳಿತಿದ್ದ ಸ್ನೇಹಿತ ವಿಕಾಸ್ ಎಂಬಾತನಿಗೆ ಗಂಭೀರ ಗಾಯಗಳಾಗಿದೆ. ಮತ್ತೊಂದು ಬೈಕ್ ಸವಾರ ಮಂಡ್ಯ ಜಿಲ್ಲೆಯ ಚಿರನಹಳ್ಳಿಯ ಗ್ರಾಮದ ತೇಜು ಮತ್ತು ಆತನ ಸ್ನೇಹಿತನ ಸ್ಥಿತಿಯೂ ಗಂಭೀರವಾಗಿದೆ.
ಬೈಕ್ಗಳ ನಡುವೆ ಡಿಕ್ಕಿ
ಕಾಮಗೆರೆ ಗ್ರಾಮದ ಸಚಿನ್ ಮೃತಪಟ್ಟ ದುರ್ದೈವಿ. ಈತನ ಬೈಕ್‍ನ ಹಿಂಬದಿಯಲ್ಲಿ ಕುಳಿತಿದ್ದ ಸ್ನೇಹಿತ ವವಿಕಾಸ್ ಎಂಬಾತನಿಗೆ ಗಂಭೀರ ಗಾಯಗಳಾಗಿದೆ. ಮತ್ತೊಂದು ಬೈಕ್ ಸವಾರ ಮಂಡ್ಯ ಜಿಲ್ಲೆಯ ಚಿರನಹಳ್ಳಿಯ ಗ್ರಾಮದ ತೇಜು ಮತ್ತು ಆತನ ಸ್ನೇಹಿತನ ಸ್ಥಿತಿಯೂ ಗಂಭೀರವಾಗಿದೆ.
ತೇಜು ಮತ್ತು ಆತನ ಸ್ನೇಹಿತ ದೀಪಾವಳಿ ಹಬ್ಬದ ಪ್ರಯುಕ್ತ ಮಂಡ್ಯದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ವಿಶೇಷ ಪೂಜೆ ಸಲ್ಲಿಸಿ ವಾಪಸ್ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.