ಚಾಮರಾಜನಗರ:ಯಾವುದೇ ದಾಖಲೆಗಳಿಲ್ಲದೇ ಲಕ್ಷಾಂತರ ರೂ. ಹಣ ಸಾಗಿಸುತ್ತಿದ್ದ ಕೇರಳ ಮೂಲದ ವ್ಯಾಪಾರಿಯನ್ನು ಚಾಮರಾಜನಗರ ತಾಲೂಕಿನ ಕೂಡಲೂರು ಗ್ರಾಮದಲ್ಲಿ ಬಂಧಿಸಲಾಗಿದೆ.
ಕೇರಳದ ಸುಲ್ತಾನ್ ಬತ್ತೇರಿಯ ಸತೀಶ್ ಬಂಧಿತ ವ್ಯಾಪಾರಿ. ಕೂಡ್ಲೂರು ಗ್ರಾಮದ ಬಳಿ ಕಾರಿನಲ್ಲಿ ಬರುತ್ತಿದ್ದ ಈತನನ್ನು ಪರಿಶೀಲಿಸಿದ ವೇಳೆ 27.73 ಲಕ್ಷ ರೂ. ಪತ್ತೆಯಾಗಿದೆ. ಇಷ್ಟು ದೊಡ್ಡ ಪ್ರಮಾಣದ ಹಣಕ್ಕೆ ಯಾವುದೇ ದಾಖಲೆ, ಪುರಾವೆ ಒದಗಿಸದಿದ್ದರಿಂದ ಸತೀಶ್ನನ್ನು ಬಂಧಿಸಲಾಗಿದೆ.