ಕರ್ನಾಟಕ

karnataka

ETV Bharat / state

ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟಿದ್ದ ಕಿರಾಣಿ ಮಾಲೀಕ ಅರೆಸ್ಟ್​ - One Arrested for illegally stored marijuana

ಅಕ್ರಮವಾಗಿ 370 ಗ್ರಾಂ ಒಣ ಗಾಂಜಾವನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದ ಕಿರಾಣಿ ಮಾಲೀಕನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.

Arrest
Arrest

By

Published : Apr 5, 2021, 1:12 PM IST

ಕೊಳ್ಳೇಗಾಲ: ತಾಲೂಕಿನ ರಾಚಪ್ಪಾಜಿನಗರ ಗ್ರಾಮದಲ್ಲಿ ಮನೆಗೆ ಹೊಂದಿಕೊಂಡಿರುವ ಅಂಗಡಿಯಲ್ಲಿ ಮಾರಾಟ ಮಾಡುವ ಉದ್ದೇಶಕ್ಕೆ ಅಕ್ರಮವಾಗಿ 370 ಗ್ರಾಂ ಒಣ ಗಾಂಜಾ ದಾಸ್ತಾನು ಮಾಡಿದ್ದ ಕಿರಾಣಿ ಮಾಲೀಕನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.

ಮಹದೇವಸ್ವಾಮಿ ಬಂಧಿತ ವ್ಯಕ್ತಿ. ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕ ಡಿ.ಸುನೀಲ್ ಹಾಗೂ ಉಪ ನಿರೀಕ್ಷಕ ಮಹೇಶ್ ನೇತೃತ್ವದಲ್ಲಿ ದಿಢೀರ್​ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ABOUT THE AUTHOR

...view details